Latestವಿದೇಶ-International

ಭಾರತ ಮೂಲದ ವಿದ್ಯಾರ್ಥಿ ಅಮೇರಿಕಾದಲ್ಲಿ ಬಂಧನ

ವಾಷಿಂಗ್ಟನ್: ಇಸ್ರೇಲ್ (Israel) ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅಮೆರಿಕದ ಪ್ರತಿಷ್ಠಿತ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ (Indian Origin) ಮೂಲದ ವಿದ್ಯಾರ್ಥಿನಿಯೊಬ್ಬಳನ್ನು (Student) ಕ್ಯಾಂಪಸ್‌ನಲ್ಲಿ ಬಂಧಿಸಲಾಗಿದೆ (Arrested) .

ಗುರುವಾರ ಮುಂಜಾನೆ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಶಿಬಿರಕ್ಕಾಗಿ ಪ್ರತಿಭಟನಾಕಾರರು ಟೆಂಟ್‌ಗಳನ್ನು ಸ್ಥಾಪಿಸಿದ್ದರು. ನಂತರ ತಮಿಳುನಾಡು (Tamil Nadu) ಮೂಲದ ಅಚಿಂತ್ಯ ಶಿವಲಿಂಗನ್ ಮತ್ತು ಹಸನ್ ಸೈಯದ್ ಅವರನ್ನು ಬಂಧಿಸಲಾಗಿದೆ. . ಇದನ್ನೂ ಓದಿ: ಮತದಾನ ಮಾಡಿದ ಸ್ಯಾಂಡಲ್‌ವುಡ್ ತಾರೆಯರು

https://youtu.be/DbyxeBZAkXM?si=Y3GD1qVzkjS4ni5o

ಇಬ್ಬರು ಪದವೀಧರ ವಿದ್ಯಾರ್ಥಿಗಳನ್ನು ಅತಿಕ್ರಮ ಪ್ರವೇಶ ಆರೋಪದಲ್ಲಿ ಬಂಧಿಸಲಾಗಿದೆ. ಈ ಬೆಳವಣಿಗೆಯಾದ ತಕ್ಷಣ ವಿವಿ ಕ್ಯಾಂಪಸ್‌ನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಕ್ಯಾಂಪಸ್‌ನಲ್ಲಿ ಟೆಂಟ್‌ಗಳನ್ನು ಹಾಕುವುದು ವಿವಿ ನೀತಿ ಉಲ್ಲಂಘನೆ ಎಂದು ಹೇಳಲಾಗಿದೆ. . ಇದನ್ನೂ ಓದಿ: ಹೆಚ್ಚಿನ ವಿದ್ಯತ್ ಬಿಲ್ ನೀಡಿದ್ದಕ್ಕೆ ಮಹಿಳಾ ಟೆಕ್ನಿಷಿಯನ್‌ಗೆ 16 ಬಾರಿ ಇರಿದು ಹತ್ಯೆ

ಶಿವಲಿಂಗA ಪ್ರಿನ್ಸ್ಟನ್‌ನಲ್ಲಿ ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದಲ್ಲಿ ಅಪಾರ ಸಾವು-ನೋವುಗಳಾಗಿವೆ ಎಂದು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಪಾನಿಪುರಿ ಕೊಡಿಸುವುದಾಗಿ ಕರೆದೋಯ್ದು ಬಾಲಕಿ ಮೇಲೆ ಅತ್ಯಾಚಾರ

https://youtu.be/FoIoyjlVOkA?si=YGzqSq2yfwt5c96c

ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ಗಳಲ್ಲಿ ದಾಂಧಲೆ ಸೃಷ್ಟಿಸಿ, ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಯುಎಸ್ ಉನ್ನತ ವಿಶ್ವವಿದ್ಯಾಲಯಗಳನ್ನು ಬೆಚ್ಚಿಬೀಳಿಸಿದೆ. ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮೊದಲು ಪ್ರತಿಭಟನೆ ಪ್ರಾರಂಭವಾಯಿತು. ಈಗ ಅದು ದೇಶಾದ್ಯಂತ ಕಾಲೇಜುಗಳಿಗೆ ಆವರಿಸಿಕೊಂಡಿದೆ. ಇದನ್ನೂ ಓದಿ: ನಿಮ್ಮ ಹಕ್ಕನ್ನು ಚಲಾಯಿಸಿ: ವೋಟ್ ಮಾಡಿದ ಬಳಿಕ ಮನವಿ ಮಾಡಿದ ಗೋಲ್ಡನ್ ಸ್ಟಾರ್

Share with Friends
author avatar
News Desk