EntertainmentLatestಚುನಾವಣೆ-Electionಬೆಂಗಳೂರು-Bengaluruರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಮತದಾನ ಮಾಡಿದ ಸ್ಯಾಂಡಲ್‌ವುಡ್ ತಾರೆಯರು

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಸ್ಯಾಂಡಲ್‌ವುಡ್ (Sandalwood) ನಟಿಮನಿಯರು ವೋಟ್ ಮಾಡಿ, ತಪ್ಪದೇ ವೋಟ್ ಮಾಡಿ ಎಂದು ಸಂದೇಶ ನೀಡಿದ್ದಾರೆ.

ಟೋಬಿ ಚಿತ್ರದ ನಟೆ ಚೈತ್ರ ಆಚಾರ್ (Chytra Achar) ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವೋಟ್ ಮಾಡಿದ್ದಾರೆ. ನಾನು ಮತದಾನ ಮಾಡಿದೆ. ನೀವು ಮಾಡಿದ್ರಾ? ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ.

ತುಪ್ಪದ ಬೆಡಗಿ ರಾಗಿಣಿ (Ragini) ಯಲಹಂಕದ ಜುಡಿಷಿಯಲ್ ಲೇಔಟ್‌ನಲ್ಲಿ ಮತದಾನ ಮಾಡಿದ್ದಾರೆ. ಕಾಂತಾರ ಬೆಡಗಿ ನಟೆ ಸಪ್ತಮಿ ಗೌಡ (Saptami Gowda) ಜೆಪಿ ನಗರದಲ್ಲಿ ಮತದಾನ ಮಾಡಿದ್ದಾರೆ. ಜೊತೆಗೆ ಮತದಾನ ಮಾಡಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಗಂಟೆಗೂ ಹೆಚ್ಚು ಕಾಲ ನಿಂತು ಮತ ಚಲಾಯಿಸಿದ ಗೋಲ್ಡನ್ ಕ್ವೀನ್ ದಂಪತಿ

ಪಂಚರಂಗಿ ನಟಿ ನಿಧಿ ಸುಬ್ಬಯ್ಯ (Niddi subbaya) ತಮ್ಮ ಕುಟುಂಬದ ಜೊತೆ ಮತದಾನ ಮಾಡಿದ್ದಾರೆ. ಇನ್ನು ಬಿಗ್ ಬಾಸ್ ಬೆಡಗಿ, ನಾಗಿಣಿ ಖ್ಯತಿಯ ನಮ್ರತಾ ಗೌಡ (Namratha Gowda) ಕುಟುಂಬದ ಜೊತೆ ಆಗಮಿಸಿ ಬಸವೇಶ್ವರ ನಗರದ ವಾಣಿ ಶಾಲೆಯಲ್ಲಿ ಮತದಾನ ಮಾಡಿ, ಅಭಿಮಾನಿಗಳಿಗೆ ವೋಟ್ ಮಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತ ಮತದಾನ ಮಾಡಿದ ಡಾಲಿ ಧನಂಜಯ್

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharathi vishnuvardan) ಅವರು ಜಯನಗರದಲ್ಲಿ ಮತದಾನ ಮಾಡುವ ಮೂಲಕ ಮತದಾರರಿಗೆ ತಪ್ಪದೇ ವೋಟ್ ಮಾಡುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಜೊರತೆ ಆರೋಪ; 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ – ಎಲ್ಲಿ?

https://youtu.be/DbyxeBZAkXM?si=Y3GD1qVzkjS4ni5o
Share with Friends
author avatar
News Desk