Crime Newsರಾಜ್ಯ-Karnatakaಹಾಸನ-Hassan

ಹಾಸನದಲ್ಲಿ ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆ- ಕಾರಣವೇನು?

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು (Beluru) ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಪತಿ ಹರೀಶ್ (50) ಪತ್ನಿ ಜಾಜಿ (45) ಮೃತಪಟ್ಟ ದಂಪತಿ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಈ ಜೋಟಿ ಜಗಳವಾಡುತ್ತಿದ್ದರು. ಆದರಂತೆಯೇ ಸೋಮವಾರ ರಾತ್ರಿಯೂ ದಂಪತಿ ನಡುವೆ ಗಲಾಟೆಯಾಗಿದೆ. ಇದನ್ನೂ ಓದಿ: ಆರ್‌ಆರ್‌ ನಗರದ ತೂಗುದೀಪ ನಿವಾಸಕ್ಕೂ ಸಂಚಕಾರ ಸಾಧ್ಯತೆ

https://youtu.be/ONvTqkOkI04?si=-Ws-lbf-PLUDCvUq

ಈ ವೇಳೆ ಕಲಹ ವಿಕೋಪಕ್ಕೆ ತಿರುಗಿದೆ, ಬಳಿಕ ಹರೀಶ್​​ ಪತ್ನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಂತರ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಕಾಡಾನೆ ಬಾವಿಗೆ ಬಿದ್ದು ಸಾವು

ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್​​

https://youtu.be/N2-OdvZAPc0?si=oS-PWXznBueqMsTq
Share with Friends
author avatar
News Desk