
ಅಜ್ಜಿ ಜಾನಕಮ್ಮನ ನೆನೆದು ಮೊಮ್ಮಗಳು ಭಾವುಕ
ಮೈಸೂರು, ಜು.12- ಹಿರಿಯ ಗಾಯಕಿ ಎಸ್.ಜಾನಕಿ ನೆನೆದು ಅವರ ಮೊಮ್ಮಗಳು ಅಪ್ಸರಾ, ಭಾವುಕರಾಗಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅನಾರೋಗ್ಯ ಸಮಸ್ಯೆಯಿಂದ ಅಜ್ಜಿ ನಿಧನರಾಗಿದ್ದು, ಘಟನೆ ದುಃಖ ಉಂಟುಮಾಡಿದೆ.

ಅವರು ತಮ್ಮ ಗಾಯನದ ಮೂಲಕ ಅಪಾರ ಜನರ ಮನ ಗೆದ್ದಿದ್ದರು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರಿಗೆ ಮೈಸೂರು ಅಂದರೆ ತುಂಬಾ ಇಷ್ಟ, ಅವರು ಇಲ್ಲೇ ಇದ್ದರು.
ಕರ್ನಾಟಕದ ಜನತೆ ಅಜ್ಜಿಗೆ ಅಪಾರ ಪ್ರೀತಿ ತೋರಿದ್ದಾರೆ. ಅಜ್ಜಿಗೆ ಸರ್ಕಾರಿ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.
