LatestTop Storiesಮೈಸೂರು-Mysuruರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಗಾನಕೋಗಿಲೆ ನೆನೆದು ಕಣ್ಣೀರಿಟ್ಟ ಗಣ್ಯರು, ಅಭಿಮಾನಿಗಳು

ಮೈಸೂರು, ಜು.12- ಗಾನಕೋಗಿಲೆ ಎಸ್. ಜಾನಕಿ ನಿಧನದಿಂದ ಅರಮನೆ ನಗರಿ ಮೈಸೂರಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಈ ವೇಳೆ ತಮ್ಮ ನೆಚ್ಚಿನ ಗಾಯಕಿಯನ್ನು ಕಳೆದುಕೊಂಡ ಅಭಿಮಾನಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.

ಪಾರ್ಥಿವ ಶರೀರ ಇಡಲಾಗಿದ್ದ ಮೈದಾನದಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ಅಭಿಮಾನಿಗಳು ಶಿಸ್ತಿನಿಂದ ಸರದಿಯಲ್ಲಿ ಬಂದು ಭಾವುಕರಾಗಿ ಕೈಮುಗಿದು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಇನ್ನು ಸಚಿವರು, ಶಾಸಕರು, ಸ್ಥಳೀಯ ಜನಪ್ರನಿಧಿಗಳು ಸೇರಿದಂತೆ ಅನೇಕ ಗಣ್ಯರು ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದ ಅಂತಿಮ ನಮನ ಸಲ್ಲಿಸಿದರು.

Share with Friends
author avatar
Digital Desk