LatestTop Storiesಧಾರವಾಡ-Dharwad

ಧಾರವಾಡ ಮನೆಯ ಗ್ಯಾಸ್ ಸಿಲಿಂಡರ್ ಸ್ಪೋಟ; ಮೂವರಿಗೆ ಗಂಭೀರ ಗಾಯ..!

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅಣ್ಣಿಗೇರಿಯ ಉದಯ ನಗರದ ನಿವಾಸಿ ಮೊಹಮ್ಮದ್ ಅಲಿ ಧಾರವಾಡ ಎನ್ನುವವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.

ಸಿಲಿಂಡರ್ ಬ್ಲಾಸ್ಟ್ ಆದ ಸಮಯದಲ್ಲಿ ಕುಟುಂಬಸ್ಥರು ಮನೆಯೊಳಗೇ ಇದ್ದು, ತಾಯಿ ಹಾಗೂ ಇಬ್ಬರು ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರವಾಡ ಮನೆಯ ಗ್ಯಾಸ್ ಸಿಲಿಂಡರ್ ಸ್ಪೋಟ ಮೂವರಿಗೆ ಗಂಭೀರ ಗಾಯ

ಸ್ಪೋಟದ ತೀವ್ರತೆಗೆ ಮನೆಯ ಗೋಡೆಯು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅವಶೇಷಗಳು ಅಕ್ಕಪಕ್ಕದ ಮನೆಗಳ ಆವರಣದಲ್ಲಿ ಬಿದ್ದಿವೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
​ಈ ಘಟನೆಯು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share with Friends
author avatar
Digital Desk