EntertainmentLatestTop Storiesರಾಜಕೀಯ | Politicsಸ್ಯಾಂಡಲ್​ವುಡ್-Sandalwood

ಮೋಕ್ಷಿತಾ ಪೈ ನಟನೆಯ ರುಕ್ಮಿಣಿ ರಾಧಾಕೃಷ್ಣ ಚಿತ್ರದ ಹಾಡುಗಳು ರಿಲೀಸ್..!

ಬೆಂಗಳೂರು: ಉಮೇಶ್ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಎನ್. ಹನುಮಂತರಾಜು ಮತ್ತು ಎನ್.ಹೆಚ್. ಉಮೇಶ್ ಜಂಟಿಯಾಗಿ ನಿರ್ಮಿಸುತ್ತಿರುವ, ಪ್ರಾಣ್ ಸುವರ್ಣ ನಿರ್ದೇಶನದ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಎರಡು ಮನಮೋಹಕ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಚಿತ್ರಕ್ಕೆ ಸುನಾದ್ ಗೌತಂ ಸಂಗೀತ ಸಂಯೋಜನೆ ಮಾಡಿದ್ದಾರೆ.
​ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್, ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಹಾಗೂ ರಿಯಾ ಸಚ್ ದೇವ್ ನಟಿಸಿದ್ದಾರೆ. ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು, “ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವನ್ನೂ ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ. ಈ ಸಿನಿಮಾ ಸಾಂಗ್ಸ್ ಮೇಲೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ” ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿದ್ದ ಹಿರಿಯ ಸಾಹಿತಿ ಕೆ.ಕಲ್ಯಾಣ್ ಮಾತನಾಡಿ, “ನಿರ್ಮಾಪಕರ ಸಿದ್ಧತೆ ಹಾಗೂ ನಿರ್ದೇಶಕರ ಬದ್ಧತೆ ಹಾಡುಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಚಿತ್ರದ ನಾಯಕಿಯ ಪಾತ್ರಕ್ಕೆ ತಮಿಳಿನ ಹಿನ್ನೆಲೆ ಇರುವುದರಿಂದ, ಕನ್ನಡ ಮತ್ತು ತಮಿಳು ಎರಡೂ ಭಾಷೆಗಳನ್ನು ಸಮ್ಮಿಳಿತಗೊಳಿಸಿ ಒಂದು ವಿಭಿನ್ನ ಹಾಡನ್ನು ಬರೆದಿದ್ದೇನೆ” ಎಂದರು.
​ನಂತರ ಮಾತನಾಡಿದ ನಾಯಕ ನಟ ಭರತ್ ಕುಮಾರ್, “ಲಹರಿ ವೇಲು ಅವರು ನಮ್ಮ ಹಾಡುಗಳ ಸಾಹಿತ್ಯವನ್ನು ಮೆಚ್ಚಿ, ಉತ್ತಮ ಮೊತ್ತಕ್ಕೆ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ರಾಧಾ ಪಾತ್ರಕ್ಕೆ ಮೋಕ್ಷಿತಾ ಪೈ ಅವರೇ ಸೂಕ್ತ ಎಂದು ನಮ್ಮ ತಾಯಿ ಸಲಹೆ ನೀಡಿದ್ದರು. ರುಕ್ಮಿಣಿ ಮತ್ತು ಕೃಷ್ಣನ ನಡುವಿನ ಆತ್ಮವೇ ರಾಧಾ. ಸುನಾದ್ ಗೌತಂ ಅವರ ಅದ್ಭುತ ಸಂಗೀತದಿಂದಾಗಿ ಹಾಡುಗಳು ಇಷ್ಟು ಚೆನ್ನಾಗಿ ಮೂಡಿಬರಲು ಸಾಧ್ಯವಾಯಿತು” ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

Share with Friends
author avatar
Digital Desk