BlogLatestTop Storiesರಾಷ್ಟ್ರೀಯ-National

ವಯನಾಡು ಭೂಕುಸಿತ ದುರಂತ : 400ರ ಗಡಿ ದಾಟಿದ ಸಾವಿನ ಸಂಖ್ಯೆ

ವಯನಾಡು : ಗುಡ್ಡಕುಸಿತವಾದ ಕೇರಳ ವಯನಾಡ್‌ನಲ್ಲಿ ಮೃತಪಟ್ಟವರ ಸಂಖ್ಯೆ ಕೂಡ ಸೋಮವಾರ 400ರ ಗಡಿ ದಾಟಿದೆ. ರಕ್ಷಣಾ ಕಾರ್ಯಾಚರಣೆ ಸತತ 8ನೇ ದಿನಕ್ಕೆ ಕಾಲಿಟ್ಟಿದ್ದು ಮಣ್ಣಲ್ಲಿ ಬಗೆದಷ್ಟು ಶವಗಳ ರಾಶಿ ಸಿಗುತ್ತಲಿದೆ. ಇನ್ನು ಕೂಡ 180ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಮುಂಡಕ್ಕೈ ಹಾಗೂ ಚೂರಲ್‌ಮಲದಲ್ಲಿ ನಾಪತ್ತೆಯಾಗಿರುವರನ್ನು ಪತ್ತೆ ಹಚ್ಚಲು ಸ್ವಯಂಸೇವಕರು, ಸೇನೆ, ನೌಕಾಪಡೆ, ಅರಣ್ಯ, ಕೆ-9 ಶ್ವಾನ ದಳ, NDRF ಮತ್ತು ಪೊಲೀಸ್ ಅಧಿಕಾರಿಗಳುಸೇರಿದಂತೆ 1,500ಕ್ಕೂ ಅಧಿಕ ಸಿಬ್ಬಂದಿ ರಾತ್ತಿ ಹಗಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಚಾಲಿಯಾರ್ ನದಿಯಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು 31 ಗುರುತು ಸಿಗದ ಮತ್ತು 158 ದೇಹದ ಭಾಗಗಳನ್ನು ಪುತುಮಲದಲ್ಲಿ ಸರ್ವಧರ್ಮ ಪ್ರಾರ್ಥನೆ ಸಭೆಯ ನಂತರ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು.

Share with Friends
author avatar
News Desk