
ಪನೀರ್ ಪ್ರಿಯರಿಗೆ ಬಿಗ್ ಶಾಕ್ – ರಾಜ್ಯದಲ್ಲಿ ಒಂದು ವರ್ಷ ಕೃತಕ ಪನೀರ್ ಬ್ಯಾನ್!
ಬೆಂಗಳೂರು: ಪನೀರ್ ಇಷ್ಟ ಪಟ್ಟು ತಿನ್ನೋರಿಗೆ ಬಿಗ್ ಶಾಕ್ ಎದುರಾಗಿದೆ. ರಾಜ್ಯದಲ್ಲಿಒಂದು ವರ್ಷ ಕೃತಕ ಪನೀರ್ (Analogue Paneer) ಬ್ಯಾನ್ ಮಾಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ.ಜನರಿಗೆ ಉತ್ತಮ ಆಹಾರ ಕೊಡುವ ಹಿನ್ನೆಲೆ ಯಲ್ಲಿ ಈ ಕ್ರಮವನ್ನು ಕೈಗೊಳ್ಳಾಗಲಿದೆ.
ಹಾಲು ಮತ್ತು ಹಾಲಿನ ಉತ್ಪನ್ನ ಬಳಸಿದ ಪನೀರ್ ಬಳಕೆ ಬದಲು ಗ್ರಾಹಕರಿಗೆ ಕೃತಕ ಅನಲಾಗ್ ಪನೀರ್ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಸಲಿ ಪನೀರ್ ಬದಲು ಅಗ್ಗದ ದರದನಾನ್-ಡೈರಿ ಪನೀರ್ ಬಳಸಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿದ್ದವು.ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ..
