
ಕೈಕೊಟ್ಟ ಪತಿಗಾಗಿ ಒಂದು ವಾರದಿಂದ ಪತ್ನಿ ಪ್ರತಿಭಟನೆ..
ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಪ್ರೀತಿಸಿ ಮಾಡುವೆ ಆಗಿದ್ದ ಜೋಡಿ ಈಗ ಪತ್ನಿ ಬೇರೆ ಜಾತಿ ಎಂಬ ಕಾರಣಕ್ಕೆ ಹೆಂಡತಿ ಮತ್ತು ಮಕ್ಕಳನ್ನು ಮನೆ ಇಂದ ಆಚೆ ಹಾಕಿದ್ದಾರೆ .
ಪ್ರೀತಿಸಿ ಮದುವೆ ಆದ ಜೋಡಿ ಗೆ ಇಬ್ಬರು ಮಕ್ಕಳು ಇದ್ದು , ಐದು -ಮೂರು ವರ್ಷಗಳು ಸಂಸಾರ ಮಾಡಿದ್ದಾರೆ .ಮತ್ತು ಬೇರೆ ಜಾತಿ ಎಂಬ ಕಾರಣಕ್ಕೆ ಆಕೆಯನ್ನು ಮನೆಯಿಂದ ಆಚೆಹಾಕಿದ್ದಾರೆ ಎಂದು ತಿಳಿದು ಬಂದಿದೆ .
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಅಮೃತ ಗಂಡ ಮತ್ತು ಮಕ್ಕಳ ಜೊತೆ ಸಂತೋಷದಿಂದ ಇದ್ದರು ,ಗಂಡ ಲಿಂಗಸುಗೂರಿನ ದರ್ಶನ್ ಮೆಹ್ತಾ ಎಂಬಾತನ ಜೊತೆ ಸಂಸಾರ ಮಾಡುತ್ತಿದ್ದರು .
ಅಮೃತ ಮತ್ತು ದರ್ಶನ್ ಮೆಹ್ತಾ ಈ ದಂಪತಿಗೆ ಇಬ್ಬರು ಮಕ್ಕಳು ಆದ ಮೇಲೆ ಹೆಂಡತಿ ಬೇರೆ ಜಾತಿ ಎಂದು ಆಕೆಯನ್ನು ಮನೆ ಇಂದ ಆಚೆ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ .
ಈ ಜೋಡಿ ಪ್ರೀತಿಸಿ ಪೊಲೀಸ್ ಹಾಗು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಆಗಿರುತ್ತಿರುತ್ತಾರೆ .ಎರಡು ವರ್ಷದಿಂದ ಪತಿಯ ಸಂಪರ್ಕ ಇಲ್ಲ ?
ಮನೆ ಹತ್ತಿರ ಸಂತ್ರಸ್ತೆ ಹೋದಾಗ ಮನೆಯ ಬಾಗಿಲು ಮುಚ್ಚಿದ ಕಾರಣ ಪತಿಯ ಅಂಗಡಿ ಮುಂದೆ ಹೆಂಡತಿ ಮತ್ತು ಮಕ್ಕಳು ಪ್ರತಿಭಟನೆ ಮಾಡಿದ್ದಾರೆ .
ನನ್ನ ಗಂಡ ನನಗೆ ಸಿಗುವವರೆಗೂ ನಾನು ಇಲ್ಲಿಂದ ಹೋಗಲ್ಲ ಎಂದು ಹೆಂಡತಿ ಮಕ್ಕಳೊಂದಿಗೆ ನೊಂದ ಪತ್ನಿ ಪ್ರತಿಭಟನೆ .
