Latestಬೆಂಗಳೂರು-Bengaluruರಾಜ್ಯ-Karnataka

ಇಂದು ಸೂರಜ್‌ ಪರ ಜಾಮೀನು ಅರ್ಜಿ ಸಲ್ಲಿಕೆ- ವಕೀಲ ನಿಖಿಲ್‌ ಕಾಮತ್‌

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ (Suraj Revanna) ಪರ ಇಂದು (ಸೋಮವಾರ) ಜಾಮೀನು ಅರ್ಜಿ ಸಲ್ಲಿಸುವುದಾಗಿ ಸೂರಜ್ ಪರ ವಕೀಲರಾಗಿರುವ (Advocate) ನಿಖಿಲ್ ಕಾಮತ್ ಮಾಹಿತಿ ನೀಡಿದ್ದಾರೆ.

ಸಸ್ಯ ಹೊಳೆನರಸಿಪುರ ಪೊಲೀಸರು ಸೂಋಜ್‌ ರೇವಣ್ಣರನ್ನು ಬಂಧಿಸಿದ್ದು, ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ರಾಜು ಸರ್ಕಾರದಿಂದ ಕೇಸ್‌ ಸಿಐಡಿಗೆ ವರ್ಗಾವಣೆ ಆಗಿರುವ ಆದೇಶವಾಗಿದೆ. ಆದ್ರೆ ಅಧಿಕೃತವಾಗಿ ಕೇಸ್‌ ದಾಖಲಾಗಿಲ್ಲ. ಆದ ಕಾರಣ ಸಿಐಡಿ ಅಧಿಕಾರಿಗಳು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರಾಗಿಲ್ಲ. ಕಸ್ಟಡಿಗೆ ಬೇಕಿದ್ದರೆ ಓಪನ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ ಅಂತ ನ್ಯಾಯಾಧೀಶರು ಸೂಚಿಸಿ, ನ್ಯಾಯಾಧೀಶರು ಸೂರಜ್‌ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದರು.

ಈ ಹಿನ್ನೆಲೆಯಲ್ಲಿ ಸೋಮವಾರ ಸಿಐಡಿ ಮುಂದಿನ ನಡೆ ನೋಡಿಕೊಂಡು ಜಾಮೀನು ಅರ್ಜಿ ಸಲ್ಲಿಸುವುದಾಗಿ ನಿಖಿಲ್‌ ಕಾಮತ್‌ ಮಾಹಿತಿ ನೀಡಿದ್ದಾರೆ.

ಸಿಐಡಿ ತನಿಖೆಗೆ ಆದೇಶ:
ಇನ್ನೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದೆ. ಆದ್ರೆ ಅಧಿಕೃತವಾಗಿ ಸಿಐಡಿಗೆ ಪ್ರಕರಣ ವರ್ಗಾವಣೆ ಆಗಿಲ್ಲ. ಹೀಗಾಗಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೋಮವಾರ ಬಾಡಿವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

https://youtu.be/OvXrOZlPR8I?si=FxfkbH3HMq8H3QWf

ಸಂತ್ರಸ್ತನ ವಿರುದ್ಧ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನ ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಭಾನುವಾರ ಬೆಳಗ್ಗಿನ ಜಾವ ಸೂರಜ್‌ರನ್ನ ಅಧಿಕೃತವಾಗಿ ಬಂಧಿಸಿದರು.

Share with Friends
author avatar
News Desk