
BMTC ಪ್ರಯಾಣಿಕರೇ ಗಮನಿಸಿ! QR ಕೋಡ್ ಸರ್ವರ್ ಡೌನ್‌ನಿಂದ ಪ್ರಯಾಣಿಕರ ಪರದಾಟ..!
ಬೆಂಗಳೂರು: BMTC ಬಸ್‌ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ತೆಗೆದುಕೊಳ್ಳುವವರಿಗೆ ನಿನ್ನೆ ಸಂಜೆಯಿಂದ ತಡರಾತ್ರಿವರೆಗೆ ಭಾರೀ ಸಮಸ್ಯೆಯಾಗಿದೆ. QR ಕೋಡ್ ಸರ್ವರ್ ಡೌನ್ ಆಗಿದ್ದರಿಂದ ಪ್ರಯಾಣಿಕರು ಬಸ್‌ನಿಂದ ಇಳಿಯುವ ಸ್ಥಿತಿಗೆ ಬಂದಿದ್ದರು.
ನಿನ್ನೆ ಸಂಜೆ 6:15ಕ್ಕೆ ಆರಂಭವಾದ ಸರ್ವರ್ ಸಮಸ್ಯೆಯಿಂದಾಗಿ ಬಸ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಆಗಲೇ ಇಲ್ಲ. “All Gateways unavailable. Please Try Again Later” ಎಂದು ETM ಯಂತ್ರದಲ್ಲಿ ಡಿಸ್ಪ್ಲೇ ಆಗುತ್ತಿತ್ತು.
QR ಕೋಡ್ ನಂಬಿಕೊಂಡೇ ಮನೆಂದ ಹೊರಬಂದಿದ್ದ ಪ್ರಯಾಣಿಕರ ಬಳಿ ಕೈಯಲ್ಲಿ ಚಿಲ್ಲರೆ ಹಣವೂ ಇರಲಿಲ್ಲ. ಆನ್‌ಲೈನ್ ಪೇಮೆಂಟ್ ಆಗದಿದ್ದರಿಂದ ನಿರ್ವಾಹಕರ ಜೊತೆ ಚಿಲ್ಲರೆ ಹಣಕ್ಕಾಗಿ ವಾಗ್ವಾದವೂ ನಡೆದಿದೆ.
“ನಾವು QR ಸ್ಕ್ಯಾನರ್ ನಂಬಿಕೊಂಡೇ ಬಂದಿದ್ದೇವೆ. ಈಗ ಹಣ ಇಲ್ಲದೆ ಹೇಗೆ ಪ್ರಯಾಣ ಮಾಡೋದು? ಬಸ್‌ನಿಂದ ಕೆಳಗೆ ಇಳಿಯಬೇಕಾ?” ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿ BMTCಯ QR ಕೋಡ್ ಸರ್ವರ್ ಡೌನ್ ಆಗಿರುವ ಘಟನೆಯಾಗಿದೆ. ನಿನ್ನೆ ತಡರಾತ್ರಿವರೆಗೂ ಸಮಸ್ಯೆ ಮುಂದುವರಿದಿತ್ತು. ಇಂದು ಬೆಳಗ್ಗೆಯಿಂದ ಮಾತ್ರ ಎಂದಿನಂತೆ QR ಕೋಡ್ ಕಾರ್ಯನಿರ್ವಹಿಸುತ್ತಿದೆ.
ಪದೇ ಪದೇ ಇಂತಹ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದರೂ BMTC ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
