Crime NewsLatestಧಾರವಾಡ-Dharwadರಾಜ್ಯ-Karnataka

ಅಂಜಲಿ ಹತ್ಯೆಗೈದ ಆರೋಪಿ ಬಂಧನ

ಹುಬ್ಬಳ್ಳಿ: ನೇಹಾ (Neha Hiremath) ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ (Anjali) ಕೊಲೆ ಪ್ರಕರಣದ ಆರೋಪಿ (Criminal) ಕೊನೆಗೂ ಪೊಲೀಸರ (Police) ಬಲೆಗೆ ಬಿದಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ

ಆರೋಪಿ ವಿಶ್ವನ ಬಗ್ಗೆ ಮತ್ತಷ್ಟು ಕೃತ್ಯಗಳು ಬಯಲಾಗುತ್ತಿದ್ದು, ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ, ಇವನ ವೃತ್ತಿಯೇ ಕಳ್ಳತನ ಮಾಡುವುದು. ಜೊತೆಗೆ ಈತ ಮದ್ಯ ವ್ಯಸನಕ್ಕೆ ಸಹ ಬಲಿಯಾಗಿದ್ದ. ಸುಮಾರು ಬಾರಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ ಎಂದು ತಿಳಿದು ಬಂದಿದೆ ಇದನ್ನೂ ಓದಿ: ಕೈಗೆ ಪೆಟ್ಟು ಮಾಡಿಕೊಂಡು ಕಾನ್ಸ್ ಚಿತ್ರೋತ್ಸವದತ್ತ ನಟಿ ಐಶ್ವರ್ಯ ರೈ

https://youtu.be/dowiMBv6QX0?si=vljS8g6h5Aok84n2

ವಿಶ್ವನ ತಾಯಿ ಸವಿತಾ ಗಂಡನನ್ನು ಕಳೆದು ಕೊಂಡಿರುವ ಅವರು ಹೊಟ್ಟೆಪಾಡಿಗೆ ಹೋಟೆಲ್‍ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆತನ ಅಪರಾಧಗಳನ್ನು ನೋಡಲಾಗದೇ, ಮಗನ ದುಷ್ಕೃತ್ಯಕ್ಕೆ ಮನೆಗೆ ಬೀಗ ಹಾಕಲಾಗಿದೆ. ಮತ್ತೊಂದು ಕಡೆ ಅವರನ್ನು ಮನೆ ಖಾಲಿ ಮಾಡುವಂತೆ ಮನೆಯ ಮಾಲೀಕರು ಒತ್ತಡ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ತಾಜಾ ಉದಾಹರಣೆ ಸಿಎಎ: ಮೋದಿ

https://youtu.be/mWARFGF6S7g?si=9ThZxnThezCCdhiU

ಆರೋಪಿ ವಿಶ್ವ ಒಮ್ಮೆ ಯಾವಾಗಲಾದರೂ ತಾಯಿಯನ್ನು ನೋಡಲು ಮನೆಗೆ ಬರುತ್ತಿದ್ದ. ಆತ ಮನೆಗೆ ಬಂದಾಗ ಜನ ನೋಡಿ ವಿವಿಧ ಆರೋಪಗಳನ್ನು ಮಾಡುತ್ತಿದ್ದರು. ಬಳಿಕ ಅವರ ತಾಯಿ ಮುಖ ನೋಡಿ ಸುಮ್ಮನಾಗುತ್ತಿದ್ದರು. ಇದೀಗ ಆರೋಪಿಯ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದ್ದು, ನೇಹಾ ಪ್ರಕರಣದಲ್ಲಿ ಆರೋಪಿಯನ್ನು ಎನ್‍ಕೌಂಟರ್ ಮಾಡಿದ್ರೆ, ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ. ಈಗ ವಿಶ್ವನನ್ನು ಎನ್‍ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ತಾಯಿ ಎಸ್ಕೇಪ್!‌

.

Share with Friends
author avatar
News Desk