Crime NewsLatestಚಿಕ್ಕಮಗಳೂರು-Chikkamagaluruರಾಜ್ಯ-Karnataka

ಬಟ್ಟೆ ತೊಳೆಯುತ್ತಿದ್ದ ಯುವತಿ ಕೊಲೆ- ಗಂಡನ ಮೇಲೆ ಅನುಮಾನ

ಚಿಕ್ಕಮಗಳೂರು: ನಾಲೆಯಲಲ್ಲಿ ಬಟ್ಟೆ ತೊಳೆಯುತ್ತಿದ್ದ ಯುವತಿಯನ್ನು (Women) ಕೊಚ್ಚಿ ಕೊಲೆ (Murder) ಮಾಡಿರುವ ಘಟನೆ ತೆರೀಕೆರೆ (Tarikere) ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೇಘನಾ (20) ಕೊಲೆಯಾದ ಯುವತಿ. ಪತಿ ಚರಣ್ ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿಬಂದಿದೆ. ಸುಮಾರು ಮೂರು ವರ್ಷಗಳಿಂದ ಮೇಘನಾ ಗಂಡ ಚರಣ್‌ನಿಂದ ದೂರವಾಗಿದ್ದಳು. ಇದನ್ನೂ ಓದಿ: ಬೇಸಿಗೆ ಬಿಸಿಲಿಗೆ ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್‌- ಹೆಚ್ಚಿದ ತರಕಾರಿ ಬೆಲೆ

https://youtu.be/BNwwXuWwJxU?si=iUgCH8F8XtBbLnmP

ಮೇಘನಾ ಶಂಕರಘಟ್ಟ ಗ್ರಾಮದಲ್ಲಿರುವ ಅವರ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು. ಭಾನುವಾರ ತಾಯಿ ಮನೆ ಕರಗುಚಿಗೆ ಬಂದಿದ್ದಳು. ಇದನ್ನೂ ಓದಿ: ನೂರಾರು ಮಹಿಳೆಯರ ಬದುಕು ಹಾಳು ಮಾಡಿದ ನಾಯಕನ ಬಗ್ಗೆ ಏಕೆ ಮೌನವಾಗಿದ್ದೀರಿ: ಪ್ರಿಯಾಂಕಾ ಗಾಂಧಿ

https://youtu.be/hUI_GuBNXgY?si=WRL7uDuFQwc2pqQ7

ಗಂಡನ ವಿಪರೀತ ಕಿರುಕುಳಕ್ಕೆ ಬೇಸತ್ತು ದೂರವಾಗಿದ್ದ ಮೇಘನಾ ಪತಿಯಿಂದ ದೂರವಾಗಿದ್ದಳು. ಪತ್ನಿ ಬಟ್ಟೆ ತೊಳೆಯಲು ಹೋಗಿದ್ದಾಗ ಆಕೆಯ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಲಕ್ಕವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಭೋಜಪುರಿ ನಟಿ ಅಮೃತಾ ಪಾಂಡೆ

Share with Friends
author avatar
News Desk