Latest

ಕಾಂಗ್ರೆಸ್‌ಗೆ ಕೈ ಕೊಟ್ಟು ಕಮಲ ಸೇರಿದ ಅಭ್ಯರ್ಥಿ – ಬಿಜೆಪಿಗೆ ಮತ್ತೊಂದು ಜಯ

ನವದೆಹಲಿ: ಕಾಂಗ್ರೆಸ್ (Congress) ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ (Akshay Kanti Bamb) ಅವರು ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ತಮ್ಮ ನಾಮಪತ್ರವನ್ನು ಹಿಂಪಡೆದು ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.

ಮಧ್ಯಪ್ರದೇಶದ (MadhyaPradesh) ಸಚಿವ ಮತ್ತು ಬಿಜೆಪಿ (BJP) ನಾಯಕ ಕೈಲಾಶ್ ವಿಜಯವರ್ಗಿಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡು ‘ಪಕ್ಷಕ್ಕೆ ಸ್ವಾಗತ’ ಎಂದು ಬರೆದ ನಂತರ ತಿಳಿದು ಬಂದಿದೆ.

ವಿಜಯವರ್ಗಿಯ ಅವರು ಫೋಟೋದೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯಾಧ್ಯಕ್ಷ ವಿಡಿ ಶರ್ಮಾ ನೇತೃತ್ವದಲ್ಲಿ ಇಂದೋರ್‌ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೂರಾರು ಮಹಿಳೆಯರ ಬದುಕು ಹಾಳು ಮಾಡಿದ ನಾಯಕನ ಬಗ್ಗೆ ಏಕೆ ಮೌನವಾಗಿದ್ದೀರಿ: ಪ್ರಿಯಾಂಕಾ ಗಾಂಧಿ

https://youtu.be/RFhW_rHRcB0?si=cv2noNx5KgpgIWB_

ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಮೇ 13 ರಂದು ಮತದಾನ ನಡೆಯಲಿದೆ. ಇಲ್ಲಿ ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಅಕ್ಷಯ್ ಕಾಂತಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇದನ್ನೂ ಓದಿ: ಬೇಸಿಗೆ ಬಿಸಿಲಿಗೆ ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್‌- ಹೆಚ್ಚಿದ ತರಕಾರಿ ಬೆಲೆ

https://youtu.be/hUI_GuBNXgY?si=kx3SXitkOdj2AOCR

ಶುಕ್ರವಾರ ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಡಿಯ ಸೊರೊ ಶಾಸಕ ಪರಶುರಾಮ್ ಧಾಡಾ ಬಿಜೆಪಿಗೆ ಮರಳಿದರು. ವಾರಗಳ ಹಿಂದೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಏಪ್ರಿಲ್ 27 ರಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿಖ್ಖರು ಬಿಜೆಪಿಗೆ ಸೇರ್ಪಡೆಗೊಂಡರು. ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿರುವ ರಾಜ್ಯದ ಜನರು

Share with Friends
author avatar
News Desk