ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಗವರ್ನರ್ ಸಿ.ವಿ ಆನಂದ ಬೋಸ್ (C. Anand Bose) ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದೆ. ರಾಜಭವನದಲ್ಲಿ (RajBhavan) ಕೆಲಸ ಮಾಡುವ ಮಹಿಳಾ ಸಿಬ್ಬಂದಿ ರಾಜ್ಯಪಾಲ (Rajyapal) ಸಿ.ವಿ ಆನಂದ ಬೋಸ್ ವಿರುದ್ಧ ದೂರು ದಾಖಲಿಸಿದ್ದು, ಬಂಗಾಳದಲ್ಲಿ (Bengal) ಅತಿ ದೊಡ್ಡ ರಾಜಕೀಯದ ಕೋಲಾಹಲಕ್ಕೆ ಕಾರಣವಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯಪಾಲ ಸಿ.ವಿ ಆನಂದ ಬೋಸ್ ವಿರುದ್ಧ ಮುಗಿಬಿದ್ದಿದ್ದು, ಲೈಂಗಿಕ ಕಿರುಕುಳ ಪ್ರಕರಣವನ್ನು ಖಂಡಿಸಿದ್ದಾರೆ. ಈ ಗಂಭೀರ ಆರೋಪವನ್ನು ಸಿ.ವಿ ಆನಂದ ಬೋಸ್ ಅವರು ತಳ್ಳಿ ಹಾಕಿದ್ದು, ಇದೆಲ್ಲಾ ಇಂಜಿನಿಯರಿಂಗ್ ವಿಶ್ಲೇಷಣೆಯಾಗಿದೆ. ಈ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಂದಕಕ್ಕೆ ಉರುಳಿದ್ದ ಬಸ್ -20 ಮಂದಿ ಸಾವು
ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಮೇಲೆ ರಾಜಭವನಕ್ಕೆ ಪೊಲೀಸರು, ಸಚಿವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜಭವನಕ್ಕೆ ಯಾವುದೇ ತನಿಖೆ ಹಾಗೂ ಪರಿಶೀಲನೆಯ ನೆಪದಲ್ಲಿ ಅನಧಿಕೃತ ಹಾಗೂ ಅಕ್ರಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಗವರ್ನರ್ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ರಾಜ್ಯಪಾಲರ ಈ ನಿರ್ಧಾರ ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇದನ್ನೂ ಓದಿ: ಗಂಡ, ಮಗ ಆಯ್ತು, ಈಗ ಭವಾನಿ ರೇವಣ್ಣಗೂ ಎದುರಾಯ್ತು ಸಂಕಷ್ಟ: ಮನೆ ಕೆಲಸದಾಕೆ ಕೇಸ್ನಲ್ಲಿ SIT ನೋಟಿಸ್
ರಾಜಭವನಕ್ಕೆ ಮಹಿಳೆಯೊಬ್ಬರು ತಾತ್ಕಾಲಿಕ ಉದ್ಯೋಗಿಯಾಗಿ ನೇಮಕಗೊಂಡಿದ್ದರು. ಇವರು 2 ಬಾರಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ರಾಜ್ಯಪಾಲರ ವಿರುದ್ಧವೇ ಕೋಲ್ಕತ್ತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಮೇಥಿ ಬಿಟ್ಟು ರಾಯ್ಬರೇಲಿಗೆ ಹೋದ ರಾಹುಲ್ – ಭಯ ಪಡಬೇಡಿ ಎಂದ ಮೋದಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಬಿಜೆಪಿ ವಿರುದ್ಧ ಟಿಎಂಸಿ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಟಿಎಂಸಿ ಆರೋಪಗಳಿಗೆ ಸೆಡ್ಡು ಹೊಡೆದಿರುವ ರಾಜ್ಯಪಾಲ ಸಿ.ವಿ ಆನಂದ ಬೋಸ್ ರಾಜಭವನ ಪ್ರವೇಶಿಸದಂತೆ ಪೊಲೀಸರು ಮತ್ತು ಸಚಿವರಿಗೆ ಗೇಟ್ ಕ್ಲೋಸ್ ಮಾಡಿದ್ದಾರೆ. ಇದನ್ನೂ ಓದಿ: ಅಮೇಥಿ ಬಿಟ್ಟು ರಾಯ್ಬರೇಲಿಗೆ ಹೋದ ರಾಹುಲ್ – ಭಯ ಪಡಬೇಡಿ ಎಂದ ಮೋದಿ
