Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಸ್ಥಾನಕ್ಕಾಗಿ ಒಪ್ಪಂದ ಆಗಿತ್ತು: ಸತೀಶ್ ಜಾರಕಿಹೊಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರ (Yatindra Siddaramaiah) ಅವರಿಗೆ ಪರಿಷತ್ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ನೇತೃತ್ವದ ಸಭೆಯಲ್ಲೂ ಈ ಬಗ್ಗೆ ಸಚಿವರಿಗೆ ಸುಳಿವು ಸಿಕ್ಕಿದೆ.

ಎಂಎಲ್‍ಸಿ ಆಯ್ಕೆ ವಿಚಾರವಾಗಿ ಮೇ 28, 29 ರಂದು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಇಂದು (ಮೇ 25) ಡಿಸಿಎಂ ಕೆಲವು ಸಚಿವರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿಷೇಧ

https://youtu.be/8HO4VosUuaI?si=oixnDSJA1ebD6bPs

ಸಭೆಯ ಬಳಿಕ ಸತೀಶ್ ಜಾರಕಿಹೊಳಿ (Satish Jarkiholi) ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಪುತ್ರ ಯತೀಂದ್ರಗೆ ವಿಧಾನ ಪರಿಷತ್ ಸ್ಥಾನ ಸಿಕ್ಕೇ ಸಿಗಲಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಅದರ ಬಗ್ಗೆ ಮಾತುಕತೆ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಳೆಯಿಂದಾಗಿ ರಾಜಕಾಲುವೆಗೆ ಉರುಳಿದ ಆಟೋ – ಚಾಲಕ ಸಾವು

ಡಿಸಿಎಂ ಜೊತೆಗೆ ಎಂಎಲ್‍ಸಿ ಚುನಾವಣೆ (MLC Election) ವಿಚಾರ ಚರ್ಚೆ ಆಯ್ತು. ಪಕ್ಷಕ್ಕಾಗಿ ದುಡಿದವರು ತುಂಬಾ ಜನ ಇದ್ದಾರೆ. ಅವರನ್ನ ಪರಿಗಣಿಸಿ ಎಂದು ಹೇಳಿದ್ದೇವೆ. ವಿಧಾನ ಪರಿಷತ್ ಸದಸ್ಯ ಸ್ಥಾನ ಬೆಂಗಳೂರಿಗೆ ಸೀಮಿತ ಆಗಬಾರದು. ಜಾತಿವಾರು ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಹೇಳಿದ್ದೇವೆ ಎಂದರು.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕಲ್ಲು ತೂರಾಟ- ಮದುವೆ ಮಾಡಿಕೊಡುವಂತೆ ಯುವತಿ ತಾಯಿಗೆ ಧಮ್ಕಿ

https://youtu.be/U8u0xL467TE?si=YCa8pmmqcNsLyv9c

ಕೆಲವರು ಅನಿವಾರ್ಯವಾಗಿ ರಿಪೀಟ್ ಆಗಲೇಬೇಕು. ಲಂಬಾಣಿ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಬೇಕು ಎಂದು ನಮ್ಮ ಒತ್ತಾಯವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳ

Share with Friends
author avatar
News Desk