EntertainmentLatest

ತಮ್ಮನ ಚಿತ್ರಕ್ಕೆ ಅಣ್ಣ ನಿರ್ಮಾಪಕ – ಕಾರ್ತಿ ಬರ್ತ್​ಡೇಗೆ ಸೂರ್ಯ ಸರ್​ಪ್ರೈಸ್

ಇಂದು ಕಾರ್ತಿ (Karthi) (ಮೇ 25) ಬರ್ತ್​ಡೇ. . ಕಾರ್ತಿ ಹಾಗೂ ನಟ ಸೂರ್ಯ (Surya) ಅಣ್ಣ ತಮ್ಮ (Brothers) ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಸದ್ಯ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಸಹೋದರರು ‘ಖೈದಿ 2’ (Khaidi) ಸಿನಿಮಾದಲ್ಲಿ ಇವರು ಮುಖಾಮುಖಿ ಆಗಲಿದ್ದಾರೆ.

ಕಾರ್ತಿ ಬರ್ತ್​ಡೇ ಅಂಗವಾಗಿ ಸೂರ್ಯ ಅವರು ತಮ್ಮನಿಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮೇಯಳಗನ್’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಕಾರ್ತಿ ಹಾಗೂ ಅರವಿಂದ್ ಸ್ವಾಮಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ.

ಈ ಬಗ್ಗೆ ಸೂರ್ಯ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಚಿತ್ರವನ್ನು ‘ಪ್ರೇಮ್​ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾ ‘96’ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಗೋವಿಂದ್ ವಸಂತ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಯಾವುದೇ ಸ್ಟಂಟ್ ಮಾಸ್ಟರ್ ಇಲ್ಲ. ಸೂರ್ಯ ಅವರು ‘ಕಂಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರು ತಮ್ಮನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

https://youtu.be/U8u0xL467TE?si=YCa8pmmqcNsLyv9c

‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ‘ಖೈದಿ’ ಚಿತ್ರದ ಸೀಕ್ವೆಲ್. ‘ವಿಕ್ರಮ್’ ಚಿತ್ರದಲ್ಲಿ ಕಾರ್ತಿ ಅವರ ಧ್ವನಿ ಮಾತ್ರ ಕೇಳುತ್ತದೆ. ಕ್ಲೈಮ್ಯಾಕ್ಸ್​ನಲ್ಲಿ ಸೂರ್ಯ ಅವರ ಎಂಟ್ರಿ ಆಗುತ್ತದೆ. ಈಗ ‘ಖೈದಿ 2’ ಸಿನಿಮಾ ಬರಬೇಕಿದೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಕಾರ್ತಿ ಮುಖಾಮುಖಿ ಆಗಲಿದ್ದಾರೆ. ಇದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

Share with Friends
author avatar
News Desk