Latestಧಾರವಾಡ-Dharwadರಾಜ್ಯ-Karnataka

ರೌಡಿಗಳಿಗೆ, ಗೂಂಡಾಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ ಕಿಡಿ

ಹುಬ್ಬಳ್ಳಿ: ರೌಡಿಗಳಿಗೆ ಮತ್ತು ಗೂಂಡಾಗಳಿಗೆ ರಾಜ ಮಾರ್ಯಾದೆ ಸಿಗುತ್ತಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಯಿ (Basavaraj Bommai) ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ನೇಹಾ (Neha) ಕೊಲೆ ಪ್ರಕರಣದ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಎಲ್ಲ ಕಡೆ ಕೊಲೆಗಳು ಸಾಮಾನ್ಯವಾಗಿದೆ. ಗದಗನಲ್ಲಿ ಗುರುವಾರ ನಾಲ್ವರ ಕೊಲೆ ಆಗಿದೆ. ಇನ್ನು ಬೆಂಗಳೂರಿನಲ್ಲಿ ಇಬ್ಬರ ಕೊಲೆ ಆಗಿದೆ. ಹಲವಾರು ತಿಂಗಳಿನಿಂದ ಇಂಥಹ ಘಟನೆಗಳು ನಡೆಯುತ್ತಿವೆ. ರೌಡಿಗಳಿಗೆ ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ ಎಂದು ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ:  ಶಾಲೆಯಲ್ಲೇ ಫೇಶಿಯಲ್ ಮಾಡಿಸಿಕೊಂಡು ಪೇಚಿಗೆ ಸಿಲುಕಿದ ಮುಖ್ಯ ಶಿಕ್ಷಕಿ

https://youtu.be/n6TR5sFjO68?si=9At31dJwUEI5UxRy

ಇನ್ನು ನೇಹಾ ಹಿರೇಮಠ ಕೊಲೆ ಕುರಿತು ಮುಖ್ಯಮಂತ್ರಿಗಳು ಇಂದು ಟ್ವೀಟ್ ಮಾಡಿದರೆ ಜವಾಬ್ದಾರಿ ಮುಗಿಯಲ್ಲ. ನೇಹಾ ಕೊಲೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು, ಆದರೆ ಇಲ್ಲಿಯ ಪೊಲೀಸರಿಂದ ಸರಿಯಾಗಿ ತನಿಖೆ ಆಗುವುದಿಲ್ಲ. ಏಕೆಂದರೆ ಪೊಲೀಸರು ನಿಷ್ಕ್ರಿರಾಗಿದ್ದಾರೆ. ಹೀಗಾಗಿ ಎಸ್‌ಐಟಿ ರಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ:  ಪ್ರಚಾರದ ವೇಳೆ ಹಿಟ್‌ & ರನ್ – ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತ ಸಾವು

ಹಾಗೇ ಬಿಟ್ಟರೆ ನಮ್ಮ ರಾಜ್ಯ ಮತ್ತೊಂದು ಬಿಹಾರ ಆಗುತ್ತೆ. ತಮ್ಮ ಮಕ್ಕಳು ಎಷ್ಟು ಸುರಕ್ಷಿತರಿದ್ದಾರೆ ಅನ್ನೋ ಆತಂಕ ಪಾಲಕರಿಗೆ ಶುರುವಾಗಿದೆ. ರಾಜ್ಯದಲ್ಲಿ ರಾತ್ರೋರಾಯತ್ರಿ ನಾಲ್ಕಾರು ಜನರು ಕೊಲೆಯಾಗುತ್ತಾರೆ ಅಂದರೆ ಏನು? ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದಿ ಸೂಚಿಸಿದ್ದಾರೆ. ಇದನ್ನೂ ಓದಿ:  ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್

https://youtu.be/RLABPlUFGgU?si=YVMrxNbEIFJhjyyZ
Share with Friends
author avatar
News Desk