
ಗಣೇಶೋತ್ಸವ ಶಾಂತಿ ಸಭೆಯ ಬ್ಯಾನರ್‌ನಲ್ಲೇ ಕನ್ನಡದ ಕಗ್ಗೊಲೆ!
ಪೋಲಿಸ್ ಠಾಣೆಯನ್ನೇ ಪೊಲೀಸ್ ರಾಣಿ ಎಂದು ಹಾಕಿದ ಸಿಬ್ಬಂದಿಗಳು. ಪೊಲೀಸರ ಸಿಂಬಲ್ ನಲ್ಲಿ ತಮಿಳು ಅಕ್ಷರಗಳು.
ಯಾದಗಿರಿ:ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಗಣೇಶೋತ್ಸವ ಶಾಂತಿ ಸಭೆ ಆಯೋಜನೆ ಮಾಡಿದ್ದು.ಶಹಾಪುರ ಗ್ರಾಮೀಣ ಸಿಪಿಐ ದೀಪಕ್ ಬೋಸ್ ರೆಡ್ಡಿ ಅಧ್ಯಕ್ಷತೆಯಲ್ಲಿ ಈ ಸಭೆ ನೆರವೇರಿದೆ .
ಸಭೆನಗೆಂದು ಅಳವಡಿಸಿದ್ದ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಬರವಣಿಗೆಯಲ್ಲಿ ಹಲವು ತಪ್ಪುಗಳು ಕಂಡುಬಂದಿದ್ದು,ಇಲಾಖೆಯ ಹೆಮ್ಮೆಯನ್ನು ಸೂಚಿಸುವ ಸಿಂಬಲನಲ್ಲಿ ತಮಿಳು ಭಾಷೆ ಬಂದಿದೆ .
ಪೊಲೀಸ್ ಇಲಾಖೆಯ ಕಾರ್ಯಕ್ರಮದ ಬ್ಯಾನರ್‌ನಲ್ಲೇ ಇಂತಹ ತಪ್ಪುಗಳು ಕಂಡುಬಂದಿರುವುದು ಸ್ಥಳೀಯ ಸಿಬ್ಬಂದಿಯ ಬೇಜವಾಬ್ದಾರಿತನ ಕಂಡು ಬಂದಿದೆ.
ಸಭೆಗೆ ಆಗಮಿಸಿದ್ದ ಹಲವು ಗಣೇಶೋತ್ಸವ ಮಂಡಳಿಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಗಣೇಶೋತ್ಸವದ ವೇಳೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಎಚ್ಚರಿಕೆ ನೀಡಬೇಕಿದ್ದ ಇಲಾಖೆ, ತನ್ನದೇ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ನೀಡಿರುವುದು ಚರ್ಚೆಗೆ ಗ್ರಾಸವಾಯಿತು.
ಬ್ಯಾನರ್‌ನಲ್ಲಿನ ತಪ್ಪುಗಳಿಂದ ಗಣೇಶೋತ್ಸವ ಮಂಡಳಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾದ ಆರೋಪ.ಸಾರ್ವಜನಿಕ ಕಾರ್ಯಕ್ರಮದ ಬ್ಯಾನರ್ ಪರಿಶೀಲನೆ ಮಾಡದೆ ಅಳವಡಿಸಿದವರು ಯಾರು? ಎಂಬ ಪ್ರಶ್ನೆ ಇದೀಗ ಎದ್ದಿದೆ.
ಪೊಲೀಸ್ ಇಲಾಖೆಯ ಅಧಿಕೃತ ಕಾರ್ಯಕ್ರಮದಲ್ಲೇ ಇಂತಹ ಪ್ರಮಾದವಾಗಿರುವುದಕ್ಕೆ ಮೇಲಧಿಕಾರಿಗಳು ಗಮನ ಹರಿಸಬೇಕೆಂಬ ಆಗ್ರಹ ಕೇಳಿಬಂದಿದೆ.
