LatestTop Storiesಯಾದಗಿರಿ

ಒಡಲು ತುಂಬಿದ ಬಸವಸಾಗರ ಜಲಾಶಯಕ್ಕೆ ಬಾಗಿನ ಯಾವಾಗ? ಸರ್ಕಾರದ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶ

ಯಾದಗಿರಿ: ಒಡಲು ತುಂಬಿದ ಬಸವಸಾಗರ ಜಲಾಶಯ ಬಾಗಿನ ಯಾವಾಗ! ಎಂಬ ಪ್ರಶ್ನೆ ರೈತರದ್ದಾಗಿದೆ.ಬಸವಸಾಗರ ಶೇ.99.72ರಷ್ಟು ಭರ್ತಿಯಾದರೂ ತಿರುಗಿ ನೋಡದ ಸರ್ಕಾರ. ಜಲಾಶಯ ಬಹುತೇಕ ಭರ್ತಿಯಾಗಿದ್ದರೂ ಸರ್ಕಾರ ಬಾಗಿನ ಅರ್ಪಿಸಿಲ್ಲ.

ಯಾದಗಿರಿ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಅನ್ನದಾತರ ಆಕ್ರೋಶ ವ್ಯಕ್ತವಾಗಿದೆ.ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ. 33 ಟಿಎಂಸಿ ಸಾಮರ್ಥ್ಯದ ಜಲಾಶಯ.

ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಾಶಯಕ್ಕೆ ಬಾಗಿನವಿಲ್ಲದೆ ಬರದ ಛಾಯೆ ಕವಿದಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ಒಳಹರಿವು ದಾಖಲಾಗಿದೆ.

ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ ರೈತರ ಜೀವನಾಡಿ ಈ ಜಲಾಶಯ.ಬಸವಸಾಗರಕ್ಕೆ ಬಾಗಿನ ಅರ್ಪಿಸಲು ರೈತರ ಆಗ್ರಹ ಹೆಚ್ಚಾಗಿದೆ.

“ಕೃಷ್ಣಾಗೆ ಸರ್ಕಾರ ಯಾಕೆ ಮಹತ್ವ ನೀಡುತ್ತಿಲ್ಲ?” – ರೈತರ ಪ್ರಶ್ನೆ.ಕಾವೇರಿ ಮಾದರಿಯಲ್ಲಿ ಬಸವಸಾಗರಕ್ಕೂ ಬಾಗಿನ ನೀಡಲು ಒತ್ತಾಯ ಮಾಡಿದ್ದಾರೆ.ಶಾಸಕರು ಸರ್ಕಾರದ ಗಮನ ಸೆಳೆದು ಬಾಗಿನ ಕಾರ್ಯಕ್ರಮ ಆಯೋಜಿಸಲು ಆಗ್ರಹ ಮಾಡಿದ್ದಾರೆ.

“ಒಡಲು ತುಂಬಿದ ಬಸವಸಾಗರಕ್ಕೆ ಬಾಗಿನ ಯಾವಾಗ?” ರೈತರ ಪ್ರಶ್ನೆ.ಭರ್ತಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸಲು ಯಾದಗಿರಿ ಜಿಲ್ಲಾಡಳಿತ ನಿರ್ಲಕ್ಷ್ಯ. ಸರ್ಕಾರದ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ ಹೆಚ್ಚಾಗಿದೆ.

Share with Friends
author avatar
Digital Desk