
ಪುಟ್ಬಾಲ್ ಟರ್ಫ್ ಮೈದಾನಕ್ಕೆ ತೀವ್ರ ವಿರೋಧ – ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಯತ್ನ
ಗದಗ:ಗದಗದಲ್ಲಿ ಪುಟ್ಬಾಲ್ ಟರ್ಫ್ ಮೈದಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.ಕ್ರೀಡಾಪಟುಗಳು, ವಿವಿಧ ಸಂಘಟನೆಗಳಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಯತ್ನ ನಡೆಸಲಾಯಿತು.
ಮುತ್ತಿಗೆ ಯತ್ನಿಸಿದ ಹೋರಾಟಗಾರರನ್ನು ತಡೆದ ಪೊಲೀಸ್ರು. ಕ್ರೀಡಾಂಗಣದ ಗೇಟ್ ಬಳಿಯೇ ತಡೆದು ವಶಕ್ಕೆ ಪಡೆದರು.ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಹೋರಾಟ ನಡೆಯಿತು. ನೂರಾರು ಕ್ರೀಡಾಪಟುಗಳು, ಯುವಕರು ಭಾಗಿಯಾಗಿದ್ದರು.
ಜಿಲ್ಲಾ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿ.ವೈ.ಎಸ್.ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ಬಂದೋಬಸ್ತ್ಏರ್ಪಡಿಸಲಾಗಿತ್ತು.
ಪುಟ್ಬಾಲ್ ಟರ್ಫ್ ಮೈದಾನ ನಿರ್ಮಾಣದಿಂದ ಇನ್ನೂಳಿದ ಕ್ರೀಡೆಗಳಿಗೆ ಅವಕಾಶವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.ಜಿಲ್ಲಾ ಕ್ರೀಡಾಂಗಣ ಹೊರತುಪಡಿಸಿ ಬೇರೆ ಜಾಗದಲ್ಲಿ ಮೈದಾನ ನಿರ್ಮಿಸಲಿ ಎಂದು ಆಗ್ರಹಿಸಿದ್ದಾರೆ.
ಜಿದ್ದಿಗೆ ಬಿದ್ದು ಜಿಲ್ಲಾ ಕ್ರೀಡಾಂಗಣದಲ್ಲೇ ನಿರ್ಮಿಸುತ್ತಿರೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟರ್ಫ್ ಮೈದಾನ ನಿರ್ಮಾಣವಾದ್ರೆ ರಾಷ್ಟ್ರೀಯ ಹಬ್ಬ ಆಚರಣೆಗೆ ಅಡಚಣೆ ಆಗಲಿದೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರ, ಜಿಲ್ಲಾಧಿಕಾರಿ, ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
