LatestTop Storiesಜಿಲ್ಲಾ ಸುದ್ದಿಗಳು | District Newsರಾಜಕೀಯ | Politics

2 ತಿಂಗಳಿಂದ ಅತ್ರೇಯ ಆಯುರ್ವೇದ ಕಾಲೇಜು ಬಂದ್ – 500 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ!

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರದಲ್ಲಿ ಕಳೆದ 2 ತಿಂಗಳಿಂದ ಅತ್ರೇಯ ಆಯುರ್ವೇದ ಕಾಲೇಜು ಬಂದ್ ಆಗಿದೆ.ಕಾಲೇಜು ದಿಢೀರ್ ಮುಚ್ಚಿದ್ದರಿಂದ 500 ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಪರೀಕ್ಷೆ, ತರಗತಿಗಳು ಇಲ್ಲದೆ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ಪ್ರತಿ ವಿದ್ಯಾರ್ಥಿಯಿಂದ ಬ್ರಹ್ಮಾಂಡ ಮೊತ್ತ 4.5 ಲಕ್ಷ ರೂ. ವಸೂಲಿ ಮಾಡಿ ವಂಚನೆ ಆರೋಪ ಕೇಳಿಬಂದಿದೆ. ಹಣ ಪಡೆದು ಕಾಲೇಜು ಮುಚ್ಚಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪೋಷಕರಿಂದ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿ, ಆಯುಷ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

2 ತಿಂಗಳಿಂದ ಅತ್ರೇಯ ಆಯುರ್ವೇದ ಕಾಲೇಜು ಬಂದ್ 500 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ

ಇಂತಹ ವಿವಾದಿತ ಕಾಲೇಜುಗಳಿಗೆ ಅನುಮತಿ ನೀಡಿದ್ದು ಹೇಗೆ ಎಂದು ಪೋಷಕರ ಪ್ರಶ್ನೆ. ಅನುಮತಿ ಇಲ್ಲದೆ, ಮೂಲಭೂತ ಸೌಕರ್ಯವಿಲ್ಲದೆ ಕಾಲೇಜು ನಡೆಸುತ್ತಿರುವ ಆರೋಪವೂ ಇದೆ.

ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತ ಸ್ಥಳೀಯ ಸಂಘಟನೆಗಳು.ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿವೆ.ನ್ಯಾಯಕ್ಕಾಗಿ ಪಾದಯಾತ್ರೆಗೆ ಮುಂದಾದ ಅತ್ರೇಯ ವೈದ್ಯಕೀಯ ವಿದ್ಯಾರ್ಥಿಗಳು. ದೊಡ್ಡಬಳ್ಳಾಪುರದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದಾರೆ.

ಸಿಟಿ ಯೂನಿಯನ್ ಬ್ಯಾಂಕ್ ಬಳಿ ಸಾಲ ಪಡೆದಿದ್ದ ಆತ್ರೇಯ ವೈದ್ಯಕೀಯ ಕಾಲೇಜು. ಕೋಟ್ಯಾಂತರ ರೂಪಾಯಿ ಸಾಲ ಪಡೆದಿತ್ತು.ಬ್ಯಾಂಕ್‌ನಿಂದ ಕಾಲೇಜಿಗೆ ಅವಕಾಶ ಕೊಟ್ಟಿದ್ದರೂ ಸಾಲ ಪಾವತಿ ಮಾಡದೆ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿರುವ ಅತ್ರೇಯ ವೈದ್ಯಕೀಯ ಕಾಲೇಜು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬ್ಯಾಂಕ್ ಸಾಲದ ಕಾರಣಕ್ಕಾಗಿಯೇ ಕಾಲೇಜಿಗೆ ಬೀಗ ಹಾಕಲಾಗಿದೆ ಎನ್ನಲಾಗಿದೆ.ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬೇಕು ಎಂದು ಪೋಷಕರ ಒತ್ತಾಯ.

Share with Friends
author avatar
Digital Desk