
ಕಲರ್ ಫುಲ್ ಅಡುಗೆಗೆ ವಿಷ ಬೆರೆಸುತ್ತಿರುವ ಫಾಸ್ಟ್ ಫುಡ್ ಅಂಗಡಿಗಳು!
ವಿಜಯಪುರ:ಕಲರ್ ಫುಲ್ ಅಡುಗೆಗಳಿಗೆ ಕಲರ್ ಫುಲ್ ಬಣ್ಣಗಳನ್ನು ಬಳಸಿ ಆಹಾರ ತಯಾರಿಸುತ್ತಿರುವ ಅಂಗಡಿಗಳು ಪತ್ತೆಯಾಗಿವೆ.
ಗ್ರಾಹಕರಿಗೆ ರುಚಿಯಾದ ಅಡುಗೆಗೆ ವಿಷ ಬೆರೆಸಿಕೊಡುತ್ತಿರುವ ಫಾಸ್ಟ್ ಫುಡ್ ಅಂಗಡಿಗಳು ಎಂದು ಆರೋಪ ಕೇಳಿಬಂದಿದೆ.ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಎಗ್ ರೈಸ್ ಅಂಗಡಿಗಳು ರಾಜಾರೋಷವಾಗಿ ನಡೆಯುತ್ತಿವೆ.
ಸಂಪೂರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಗೊತ್ತಾಯ್ತು ಹೋಟೆಲ್ಗಳ ಬಣ್ಣ ಬಯಲು.ನಮ್ಮ ರಿಯಾಲಿಟಿ ಚೆಕ್ನಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಬಿಟ್ಟುಬಿಡದೆ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ ಆಗುತ್ತಿದ್ದರೂ ಅದನ್ನು ಲೆಕ್ಕಿಸದೆ ಗ್ರಾಹಕರ ಜೊತೆ ಆಟ ಆಡುತ್ತಿರುವ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ನ ಮಾಲೀಕರು.
ಕೆಂಪು ಬಣ್ಣದ ಹಾನಿಕಾರಕ ಬಣ್ಣ ಬಳಸಿ ಮತ್ತು ಟೇಸ್ಟಿಂಗ್ ಪೌಡರ್ ಬಳಸಿ ಚಿಕನ್ ಕಬಾಬ್, ಎಗ್ ರೈಸ್ ಕೊಡುತ್ತಿರುವ ವ್ಯಾಪಾರಸ್ಥರು. ನಿಷೇಧಿತ ಕೆಮಿಕಲ್ ಬಣ್ಣಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ.
ತೆರೆದಿಟ್ಟ ಆಹಾರದ ಮೇಲೆ ಧೂಳಿನ ಕಣ ಒಂದು ಕಡೆ ಆದರೆ ಅದನ್ನು ತಿಂದವರ ಪಾಡು ಆಸ್ಪತ್ರೆಯ ಕಡೆ. ಬಹಿರಂಗವಾಗಿ ಆಹಾರ ಇಟ್ಟು ಮಾರಾಟ ಮಾಡುತ್ತಿದ್ದಾರೆ.
ಬಳಸಿದ ಎಣ್ಣೆಯಲ್ಲಿ ಪದೇ ಪದೇ ಅದೇ ಎಣ್ಣೆಯಲ್ಲಿ ಕರಿಯುವ ಚಿಕನ್ ಕಬಾಬ್ ಮತ್ತು ಆಮ್ಲೆಟ್ ಹಾಗೂ ಗೋಬಿ ಮಂಚೂರಿ. ಕಪ್ಪಾದ ಎಣ್ಣೆಯಲ್ಲೇ ಮತ್ತೆ ಮತ್ತೆ ಕರಿಯಲಾಗುತ್ತಿದೆ.
ಕಣ್ಮುಚ್ಚಿ ಕುಳಿತ ವಿಜಯಪುರ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು. ದಾಳಿ ನಡೆಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ.ಹಾನಿಕಾರಕ ಬಣ್ಣಗಳಿಂದ ಹರಡುತ್ತೆ ಕ್ಯಾನ್ಸರ್, ಅದರಿಂದ ತಯಾರಿಸಿದ ಆಹಾರ ತಿಂದವರ ಗತಿ ಗೋವಿಂದಾ ಗೋವಿಂದ.ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸ್ವಚ್ಛತೆ ಇಲ್ಲದ ಅಡುಗೆ ಮಾಡುವ ಸ್ಥಳ ಮತ್ತು ಸುರಕ್ಷಿತ ನಿಯಮಗಳನ್ನು ಉಲ್ಲಂಘಿಸುವ ಕೆಲಸಗಾರರು.ಬಾಯಿ ರುಚಿ ತೀರಿಸಿಕೊಳ್ಳಲು ಬರುವ ಗ್ರಾಹಕರೇ ಎಚ್ಚರ ಎಚ್ಚರ ಎಚ್ಚರ.
