LatestTop Storiesಚಿಕ್ಕಮಗಳೂರು-Chikkamagaluru

ಮೂಢನಂಬಿಕೆಗಳ ಹೆಸರಿನಲ್ಲಿ ಯುವತಿಗೆ ಚಿತ್ರ ಹಿಂಸೆ..

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಭೂತ , ಪ್ರೇತ ಬಿಡಿಸುವ ಮೂಢ ನಂಬಿಕೆ ಇಂದ ಯುವತಿಗೆ ಚಿತ್ರಹಿಂಸೆ ಕೊಟ್ಟ ಪ್ರಕರಣ ಚಿಕ್ಕಮಗಳೂರಿನ ಕೊಪ್ಪದ ಮೇಕನಹಡ್ಲುವಿನಲ್ಲಿ ಬೆಳಕಿಗೆ ಬಂದಿದೆ .

ಚಿಕ್ಕಮಗಳೂರಿನಲ್ಲಿ ಯುವತಿಗೆ ಭೂತ ಪ್ರೇತ ಹಿಡಿದೇ ಎಂದು ಯುವತಿಯ ಪೋಷಕರು ಕೊಪ್ಪದ ಮೇಕನಹಡ್ಲುವಿನಲ್ಲಿಭೂತ ಬಿಡಿಸುವ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಆ ಯುವತಿಗೆ ಭೂತ ಬಿಡಿಸುವ ನೆಪದಲ್ಲಿ ಚಿತ್ರ ಹಿಂಸೆಯನ್ನು ಕೊಡುತ್ತಿರುವುದು ಕಂಡು ಬಂದಿದೆ. ಹಾಗು ಕೋಳಿಯ ರಕ್ತವನ್ನು ಯುವತಿಗೆ ಕುಡಿಯುವಂತೆ ಒತ್ತಾಯಮಾದ್ದಾರೆ .

ನಂತರ ಕೋಳಿಯ ರಕ್ತವನ್ನು ಕುಡಿಯದಿದ್ದರೆ ಕರ್ಪೂರ ಬಾಯಲ್ಲಿ ಇಡೋದಾಗಿ ಯುವತಿಗೆ ಬೆದರಿಕೆಯನ್ನು ಹಾಕಿದ್ದಾರೆ ಈ ಮೂಢ ನಂಬಿಕೆಯ ಕುರಿತು ಕೊಪ್ಪದ ಸತೀಶ್ ಪಾತ್ರಿ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ . ಮತ್ತು ಆ ಯುವತಿಗೆ ಚಿತ್ರ ಹಿಂಸೆ ಕೊಟ್ಟ ವಿಡಿಯೋ ಫುಲ್ ವೈರಲ್ ಆಗಿದೆ .ವಶೀಕರಣದ ಹೆಸರಲ್ಲಿ ಹಣ ತೆಗೆದುಕೊಂಡು ಜನರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ..

Share with Friends
author avatar
Digital Desk