
19 ನೂತನ ಸಚಿವರಿಗೆ ನಾಳೆಯೊಳಗೆ ಖಾತೆ ಹಂಚಿಕೆಸಾಧ್ಯತೆ
ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ 19 ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತ ಕಸರತ್ತು ಅಂತಿಮ ಹಂತ ತಲುಪಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಹಿರಿಯ ನಾಯಕರೊಂದಿಗೆ ಈ ಕುರಿತು ಮಹತ್ವದ ಚರ್ಚೆ ನಡೆದಿದ್ದು, ನಾಳೆಯೊಳಗೆ ಸಚಿವರ ಖಾತೆಗಳನ್ನು ಅಧಿಕೃತವಾಗಿ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಸಚಿವರ ಅನುಭವ, ಪ್ರಾದೇಶಿಕ ಸಮತೋಲನ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಖಾತೆ ಹಂಚಿಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ನಡುವೆ ಸಂಪೂರ್ಣ ನ್ಯೂಸ್ಗೆ ಸಂಭಾವ್ಯ ಖಾತೆಗಳ ಪಟ್ಟಿ ಲಭ್ಯವಾಗಿದ್ದು, ಅದರಂತೆ ಕೆಳಕಂಡ ಸಚಿವರಿಗೆ ಈ ಇಲಾಖೆಗಳು ದೊರೆಯುವ ಸಾಧ್ಯತೆ ಇದೆ.
ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ಬಳಿಕವೇ ಸಚಿವರ ಅಂತಿಮ ಖಾತೆಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಆದಾಗ್ಯೂ, ರಾಜಕೀಯ ವಲಯದಲ್ಲಿ ಈ ಸಂಭಾವ್ಯ ಖಾತೆಗಳ ಪಟ್ಟಿಯೇ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಭಾವ್ಯ ಖಾತೆಗಳ ಪಟ್ಟಿ
ಪಿ.ಎಂ. ನರೇಂದ್ರಸ್ವಾಮಿ – ಸಮಾಜ ಕಲ್ಯಾಣ ಇಲಾಖೆ
ಬಸವರಾಜ ರಾಯರೆಡ್ಡಿ – ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ಪ್ರವಾಸೋದ್ಯಮ
ಎಸ್.ಎಸ್. ಮಲ್ಲಿಕಾರ್ಜುನ – ತೋಟಗಾರಿಕೆ ಹಾಗೂ ಗಣಿ-ಭೂವಿಜ್ಞಾನ
ಎನ್. ಚಲುವರಾಯಸ್ವಾಮಿ – ಕೃಷಿ
ಕೆ.ಎಂ. ಶಿವಲಿಂಗೇಗೌಡ – ವಸತಿ
ಲಕ್ಷ್ಮಣ ಸವದಿ – ಸಹಕಾರ ಹಾಗೂ ಸಕ್ಕರೆ
ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಜಮೀರ್ ಅಹಮದ್ ಖಾನ್ – ವಕ್ಫ್, ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
ಕೆ.ಎನ್. ಬಸವಂತಪ್ಪ – ಪೌರಾಡಳಿತ
ವಿಜಯಾನಂದ ಕಾಶಪ್ಪನವರ್ – ಕೈಮಗ್ಗ, ಜವಳಿ ಹಾಗೂ ಕೃಷಿ ಮಾರುಕಟ್ಟೆ
ಅಜಯ್ ಸಿಂಗ್ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು
ರುದ್ರಪ್ಪ ಲಮಾಣಿ – ಅಬಕಾರಿ ಇಲಾಖೆ
ಹೆಚ್.ಸಿ. ಬಾಲಕೃಷ್ಣ – ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ
ರಿಜ್ವಾನ್ ಅರ್ಷದ್ – ಉನ್ನತ ಶಿಕ್ಷಣ ಇಲಾಖೆ
ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಹಾಗೂ ರೇಷ್ಮೆ
ಬಿ. ನಾಗೇಂದ್ರ – ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ
ಸಂತೋಷ್ ಎಸ್. ಲಾಡ್ – ಕಾರ್ಮಿಕ ಇಲಾಖೆ
ಶಿವರಾಜ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಟಿ. ರಘುಮೂರ್ತಿ – ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
