Latestಬೆಂಗಳೂರು-Bengaluru

ಬಸ್‌ನಲ್ಲಿ ಜೋರಾಗಿ ಸಾಂಗ್, ರೀಲ್ಸ್ ಹಾಕಿದ್ರೆ ಕೆಳಗೆ ಇಳಿಸ್ತಾರೆ..!

ಬೆಂಗಳೂರು: ರಾಜಧಾನಿಯ ಸಾರಿಗೆ ಜಾಲದ ಜೀವನಾಡಿಯಾಗಿರುವ ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ.

ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ, ಇದೀಗ ಬಿಎಂಟಿಸಿ ಕೂಡ ಫುಲ್‌ ಅಲರ್ಟ್ ಆಗಿದೆ. ಬಸ್ ಪ್ರಯಾಣಿಕರ ನೆಮ್ಮದಿಯ ಸವಾರಿಗಾಗಿ ಇಲಾಖೆ ಕಟ್ಟುನಿಟ್ಟಿನ ರೂಲ್ಸ್ ತಂದಿದೆ.ಬಸ್‌ನಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ಜೋರಾಗಿ ಸಾಂಗ್ ಪ್ಲೇ ಮಾಡುವುದು, ದೊಡ್ಡ ಧ್ವನಿಯಲ್ಲಿ ವೀಡಿಯೊಗಳನ್ನು ನೋಡುವುದು ಅಥವಾ ಅನುಚಿತ ವರ್ತನೆ ತೋರಿಸುವ ಪ್ರಯಾಣಿಕರಿಗೆ ಬಿಎಂಟಿಸಿ ಖಡಕ್‌ ಎಚ್ಚರಿಕೆ ನೀಡಿದೆ.

ವಾಟ್ಸಾಪ್ ಸ್ಟೇಟಸ್, ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಯೂಟ್ಯೂಬ್ ನೋಡುವಾಗ ಜೋರಾಗಿ ಸೌಂಡ್ ಇಟ್ಟುಕೊಳ್ಳುವ ‘ಸೌಂಡ್ ಪಾರ್ಟಿಗಳಿಗೆ’ ಕಟ್ಟುನಿಟ್ಟಿನ ನಿಯಮ ಅನ್ವಯವಾಗಲಿದೆ. ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸದೆ ಸಾರ್ವಜನಿಕರಿಗೆ ತೊಂದರೆ ಕೊಡುವಂತಿಲ್ಲ.

ಮೊಬೈಲ್‌ನಲ್ಲಿ ಜೋರಾಗಿ ಸಾಂಗ್ ಹಾಕುವವರಿಗೆ ಮತ್ತು ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ಮೊದಲಿಗೆ ವಾರ್ನಿಂಗ್ ನೀಡಲು ನಿರ್ವಾಹಕರಿಗೆ ಬಿಎಂಟಿಸಿ ಸೂಚನೆ ನೀಡಿದೆ.
​ಒಂದು ವೇಳೆ ಕಂಡಕ್ಟರ್ ನೀಡಿದ ಎಚ್ಚರಿಕೆಗೆ ಬಗ್ಗದೆ, ಮತ್ತೆ ಲೌಡ್ ಸ್ಪೀಕರ್ ಹಾಕಿಕೊಂಡು ಉದ್ಧಟತನ ತೋರಿದರೆ, ಅಂತಹವರನ್ನು ತಕ್ಷಣವೇ ಬಸ್‌ನಿಂದ ಕೆಳಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಯಾಣಿಕರ ಜೊತೆ ಅಥವಾ ಸಿಬ್ಬಂದಂದಿಯೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
​ಬಸ್ ಪ್ರಯಾಣಿಕರ ಸೌಹಾರ್ದಯುತ ಪ್ರಯಾಣಕ್ಕಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕಾಗಿ ಬಿಎಂಟಿಸಿ ಮನವಿ ಮಾಡಿದೆ.

Share with Friends
author avatar
Digital Desk