BlogLatestಬೆಂಗಳೂರು-Bengaluru

ಅತುಲ್‌ ಸುಭಾಷ್ ಸಾವಿಗೆ ನಾಯ ಕೊಡಿಸುವಂತೆ ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರು : ಹೆಂಡತಿ ಮತ್ತು ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಅತುಲ್‌ ಸುಭಾಷ್ ಅವರಿಗೆ ನ್ಯಾಯ ಅತುಲ್‌ ಸುಭಾಷ್ ಸಾವಿಗೆ ನಾಯ ಕೊಡಿಸುವಂತೆ ಬೆಂಗಳೂರಲ್ಲಿ ಪ್ರತಿಭಟನೆ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದೆ.

ದಿ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಿ ಅತುಲ್ ಸುಭಾಷ್ ಸಾವಿಗೆ ನ್ಯಾಯ ಬೇಕು ಅಂತ ಆಗ್ರಹ ಮಾಡಿದರು. ಅತುಲ್ ಪತ್ನಿಗೆ ಶಿಕ್ಷೆ ಆಗ್ಬೇಕು, ಅತುಲ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದೊಂದು ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅತುಲ್ ಸ್ನೇಹಿತರು ಮಾತನಾಡಿ. ಅತುಲ್ ಡಿಫ್ರೆಶನ್ ನಲ್ಲಿ ಇರಲಿಲ್ಲ, ಚೆನ್ನಾಗಿದ್ದ , ಸುಳ್ಳು ಕೇಸ್ ಗಳನ್ನ ದಾಖಲಿಸಿ ಅತುಲ್ ಗೆ ಹಿಂಸೆ ಕೊಡಲಾಗಿದೆ. ಇದು ಕೇವಲ ಅತುಲ್ ಸಮಸ್ಯೆ ಮಾತ್ರವಲ್ಲ, ಸಾಕಷ್ಟು ಗಂಡಸರಿಗೆ ಇದೇ ಥರಾ ಆಗ್ತಿದೆ ಭಾರತೀಯ ಕಾನೂನು ಸುಧಾರಿಸಬೇಕು ಕಾನೂನನನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವವರಿಗೆ ಪಾಠ ಆಗ್ಬೇಕು, ಅತುಲ್ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಒತ್ತಾಯಿಸಿದರು.

Share with Friends
author avatar
News Desk