Blogರಾಜ್ಯ-Karnataka

ನಾಗಮಂಗಲ ಗಲಭೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಆಗಬೇಕು : ವಿ.ಸೋಮಣ್ಣ

ಮೈಸೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಅವರ ಮೇಲೆ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ ಗೃಹ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಸಚಿವರು ಹಿರಿಯರು, ಅನುಭವಿಗಳು, ಯಾವ ಕಾರಣಕ್ಕಾಗಿ ಇದನ್ನ ಸಣ್ಣ ಪ್ರಕರಣ ಎಂದಿದ್ದಾರೊ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಮೊದಲು ಮತ ಓಲೈಕೆ ರಾಜಕಾರಣ ಬಿಡಬೇಕು,ಎಲ್ಲಕ್ಕಿಂತ ದೇಶ ಮುಖ್ಯ ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು, ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ ಅದರ ಮೆರವಣಿಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸೋಮಣ್ಣ‌ ಹೇಳಿದರು.

ಗಣಪತಿ ಪೂಜೆ‌ ವೇಳೆ ಮುಖ್ಯ ನ್ಯಾಯಾಧೀಶರ ಜೊತೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ,ಅದರಲ್ಲಿ ತಪ್ಪೇನಿದೆ,
ಇಬ್ಬರು ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು,ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕಬೇಕು,ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಸೋಮಣ್ಣ ಕಾಂಗ್ರೆಸ್ ನವರಿಗೆ‌ ಟಾಂಗ್ ನೀಡಿದರು.

ಅವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ, ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ, ಇದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಹೇಳಿದರು.

Share with Friends
author avatar
News Desk