Crime NewsLatestಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ರಸ್ತೆ ಅಪಘಾತದಲ್ಲಿ KPTCL​​​ನ ಇಬ್ಬರು ಸಿಬ್ಬಂದಿ, ಓರ್ವ ಲೈನ್​ ಮ್ಯಾನ್​ ಸಾವು

ಚಿಕ್ಕಬಳ್ಳಾಪುರ: ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ (Gauribidanur Police Station) ನಗರಗೆರೆ ಬಳಿ ನಡೆದಿದೆ.

ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಬೆಸ್ಕಾಂ ಶಾಖೆಯ ಲೈನ್‌‌ಮ್ಯಾನ್‌ಗಳಾದ (BESCOM Lineman) ಶ್ರೀಧರ್ (28) ವೇಣುಗೋಪಾಲ (38), ಮಂಜುನಾಥ (37), ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು- 40% ಜಾಹೀರಾತು ಪ್ರಕರಣದಲ್ಲಿ ರಾಗಾಗೆ ರಿಲೀಫ್‌

https://youtu.be/IrlpjBl1yQk?si=WjGSGcyKYuxtxbB_

ಕಳೆದ ರಾತ್ರಿ ಗೌರಿಬಿದನೂರು ತಾಲ್ಲೂಕು ನಗರಗೆರೆ-ವಾಟದಹೊಸಹಳ್ಳಿ ರಸ್ತೆಯಲ್ಲಿ ವೇಣುಗೋಪಾಲ್ ಕಾರಿನಲ್ಲಿ ಬರುವಾಗ, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿದೆ. ಇದರಿಂದ ಇನ್ನೂ ಕಾರಿನಲ್ಲಿದ್ದ ಶಿವಕುಮಾರ್‌ ಎಂಬಾತ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಸಂತ್ರಸ್ತೆ ಕಿಡ್ನ್ಯಾಪ್​ ಕೇಸ್​​: ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು

https://youtu.be/S0u4JJ1Hrxg?si=sq6_DnhNmULgDMT3

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ನಗರಗೆರೆ ಬಳಿ ತಿರುವು ಇರುವುದರಿಂದ ಮುಂಜಾನೆ ಸಮಯದಲ್ಲಿ ಚಾಲಕ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಉಪ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಫಿಕ್ಸ್ – ಯಾರಾಗ್ತಾರೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ

https://youtu.be/SsmE2YqYo7g?si=DEZZSjlFRoY1MuUQ

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟವರ ಶವಗಳನ್ನ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರಗೆ ರವಾನಿಸಿದ್ದಾರೆ.ಇದನ್ನೂ ಓದಿ: ಸಾಗರ್‌ ಖಂಡ್ರೆ ಗೆಲುವು – ಕಿರಿಯ ಸಂಸದರಾಗಿ ಸಂಸತ್ತಿಗೆ ಎಂಟ್ರಿ

Share with Friends
author avatar
News Desk