Latestಚುನಾವಣೆ-Electionಬೀದರ್​-Bidarರಾಜಕೀಯ | Politicsರಾಜ್ಯ-Karnataka

ಸಾಗರ್‌ ಖಂಡ್ರೆ ಗೆಲುವು – ಕಿರಿಯ ಸಂಸದರಾಗಿ ಸಂಸತ್ತಿಗೆ ಎಂಟ್ರಿ

ಬೀದರ್‌: ಲೋಕಸಭಾ ಚುನಾವಣಾ (Lok Sabha Election) ಫಲಿತಾಂಶದಿಂದಾಗಿ ಬೀದರ್‌ನಲ್ಲಿ (Bidar) ಭಾಲ್ಕಿ ಕ್ಷೇತ್ರ ಈಗ ರಾಜಕೀಯವಾಗಿ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

ಬೀದರ್ ಲೋಕಸಭಾ ಕೇತ್ರದ ಚುನಾವಣೆಯಲ್ಲಿ ಖಂಡ್ರೆ ಪರಿವಾರದ ಮೂರನೇ ತಲೆಮಾರಿನ 26 ವಯಸ್ಸಿನ ಸಾಗರ ಖಂಡ್ರೆ ಗೆಲುವು ಭಾಲ್ಕಿ (Bhalki) ಹಿರಿಮೆ ಮತ್ತಷ್ಟು ಎತ್ತರಕ್ಕೇರಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು 1.28 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಸಾಗರ್ ಖಂಡ್ರೆ (Sagar Khandre) ಕಿರಿಯ ಸಂಸದರಾಗಿ ಸಂಸತ್ತಿಗೆ ಎಂಟ್ರಿ ಕೊಟ್ಟಿದಾರೆ. ಇದನ್ನೂ ಓದಿ: ಉಪ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಫಿಕ್ಸ್ – ಯಾರಾಗ್ತಾರೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ

https://youtu.be/SsmE2YqYo7g?si=sYyygHrazNEeOqav

ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಮಾಜಿ ಶಾಸಕ ದಿವಂಗತ ವಿಜಯ ಕುಮಾರ್ ಖಂಡ್ರೆ, ಹಾಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ್ ಡಿಸಿಸಿ ಬ್ಯಾಂಕ್ ಮತ್ತು ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮರ ಖಂಡ್ರೆ ಹಾಗೂ ನೂತನ ಸಂಸದ ಸಾಗರ್ ಖಂಡ್ರೆ ಭಾಲ್ಕಿ ನೆಲದವರಾಗಿದ್ದಾರೆ. ಹೀಗಾಗಿ ಖಂಡ್ರೆ ಕುಟುಂಬ ಈಗ ಮತ್ತೆ ರಾಜಕೀಯವಾಗಿ ಪಾರಮ್ಯ ಮೆರೆದಿದ್ದು ಭಾಲ್ಕಿ ರಾಜಕೀಯ ಪವರ್ ಸೆಂಟರ್‌ ಆಗಿ ಬದಲಾಗಿದೆ. ಇದನ್ನೂ ಓದಿ: ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೆಲುವು

https://youtu.be/SsmE2YqYo7g?si=uoXkvPIX0zkvHJjH

ಶತಾಯುಷಿ ಡಾ. ಭೀಮಣ್ಣ ಖಂಡ್ರೆಯವರು ಒಂದು ಬಾರಿ ಸಚಿವರಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಭೀಮಣ್ಣ ಖಂಡ್ರೆಯವರ ಪುತ್ರ ಈಶ್ವರ್‌ ಖಂಡ್ರೆ (Eshwara Khandre) ಅವರು ಕ್ರಮವಾಗಿ 2013, 2018 ಮತ್ತು 2023 ಭಾಲ್ಕಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸದ್ಯ ಅರಣ್ಯ ಖಾತೆ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: 3 ನೇ ಬಾರಿ ಪ್ರಧಾನಿಯಾಗಿ ಮೋದಿ ಜೂ.9 ರಂದು ಪ್ರಮಾಣ ವಚನ

https://youtu.be/EN_1kRxjo-4?si=YbXUUbHNjEiHp4bw
Share with Friends
author avatar
News Desk