Crime NewsLatestಬೆಂಗಳೂರು-Bengaluruರಾಜ್ಯ-Karnataka

ಸಂತ್ರಸ್ತೆ ಕಿಡ್ನ್ಯಾಪ್​ ಕೇಸ್​​: ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ (Kidnap) ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೆ ಹೈಕೋರ್ಟ್ (High Court) ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ವಿಚಾರಣೆಗೆ ಹಾಜರಾಗದ ಭವಾನಿ ರೇವಣ್ಣ
ಭವಾನಿ ರೇವಣ್ಣಗೆ ಎಸ್​ಐಟಿ (SIT) ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಪತ್ರದಂತೆ ಎಸ್​ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದರು. ಆದರೆ, ಮನೆಯೊಳಗೆ ಹೋದ ಎಸ್​ಐಟಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಭವಾನಿ ರೇವಣ್ಣ ಮನೆಯಲ್ಲಿ ಇರಲಿಲ್ಲ. ಇದರಿಂದ ಎಸ್​ಐಟಿ ಅಧಿಕಾರಿಗಳು ಸಂಜೆಯ ವರೆಗು ಕಾದು ನಿರಾಸೆಯಿಂದ ತೆರಳಿದ್ದಾರೆ.

https://youtu.be/SsmE2YqYo7g?si=h1WdMU2oPzj90vcw

15 ದಿನಗಳ ಹಿಂದೆಯೇ ಮನೆ ತೊರೆದಿರುವ ಭವಾನಿ ರೇವಣ್ಣ
ಹೊಳೆನರಸೀಪುರದಲ್ಲಿರುವ ಭವಾನಿ ರೇವಣ್ಣ ನಿವಾಸ ಖಾಲಿಯಾಗಿದೆ. ಬಂಧನದ ಭೀತಿಯಿಂದ ಭವಾನಿ 15 ದಿನಗಳ ಹಿಂದೆಯೇ ಮನೆ ತೊರೆದಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಕೆಲಸದವರು ಮಾತ್ರ ಇದ್ದಾರೆ. ಹೀಗಾಗಿ ಭವಾನಿ ಮೊಬೈಲ್ ಲೊಕೇಶನ್ ಮೇಲೆ ಎಸ್​ಐಟಿ ಕಣ್ಣಿಟ್ಟಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನ ಸಂಪರ್ಕಿಸಲು ಯತ್ನಿಸುತ್ತಿದೆ.

https://youtu.be/S0u4JJ1Hrxg?si=AW-Qz1BgfsbNKS9P
Share with Friends
author avatar
News Desk