LatestTop Storiesಬೆಂಗಳೂರು-Bengaluru

ಕಂಡಕ್ಟರ್ ಬ್ಯಾಗ್ ಕದ್ದ ಖತರ್ನಾಕ್ ಲೇಡಿ..!

ಬೆಂಗಳೂರು: ಬೆಂಗಳೂರು ರಾಜಧಾನಿಯ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗನ್ನೇ ಕದ್ದಿರುವ ಘಟನೆ ಪತ್ತೆಯಾಗಿದೆ, ಬಿಎಂಟಿಸಿ ಬಸ್‍ ನಂಬರ್ KA-57 F 6331 ನಲ್ಲಿ ಪ್ರಯಾಣಿಕರು ಹೆಚ್ಚಾಗಿರುವುದನ್ನೆಲಾಭ ಮಾಡಿಕೊಂಡುಮಹಿಳೆಯೊಬ್ಬಳು, ತನ್ನ ಚಾಣಾಕ್ಷತನ ಬುದ್ದಿಯಿಂದ ಕಂಡಕ್ಟರ್ ಅವರ ಡ್ಯೂಟಿ ಬ್ಯಾಗ್‌ ಅನ್ನು ಎಗರಿಸಿದ್ದಾಳೆ. ಕದ್ದ ಟಿಕೆಟ್‌ ಮತ್ತು ಹಣದ ಬ್ಯಾಗ್‌ ಅನ್ನು ತಾನು ತಂದಿದ್ದ ಬ್ಯಾಗ್‌ನೊಳಗೆ ಯಾರಿಗೂ ತಿಳಿಯದಂತೆ ಅಡಗಿಸಿಟ್ಟುಕೊಂಡಿದ್ದಳು.

ಬ್ಯಾಗ್‌ ನಾಪತ್ತೆಯಾಗಿರುವುದು ಗೊತ್ತಾದ ತಕ್ಷಣವೇ, ಕಂಡಕ್ಟರ್ ಬಸ್‍‌ನ ಡೋರ್ ಕ್ಲೋಸ್ ಮಾಡಿದ್ದಾರೆ. ಸಿಕ್ಕಿಬಿದ್ದ ಮಹಿಳೆಗೆ ಬಸ್‍‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಸಿಕ್ಕಿಹಾಕಿಕೊಂಡ ನಂತರ ಆ ಮಹಿಳೆ ಅಮಾಯಕಿಯಂತೆ ನಟಿಸಿ ನಾನು ಕದ್ದಿಲ್ಲ ಎಂದು ಜೋರಾಗಿ ಕಿರುಚಾಡುತ್ತಾ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ.ನನ್ನ ಬ್ಯಾಗ್ ಓಪನ್ ಮಾಡಬೇಡಿ,ಎಂದು ಹೇಳಿ ಚೀರಾಡಿದ್ದಾಳೆ.

ಆಕೆಯ ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಕಂಡಕ್ಟರ್‌ನ ಟಿಕೆಟ್ ಬ್ಯಾಗ್ ಇರುವುದು ಪತ್ತೆಯಾಗಿದೆ. ನಂತರ ಬಸ್‍ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಳ್ಳತನ ಆರೋಪದ ಮೇಲೆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಈ ಮಹಿಳೆ ತಮಿಳುನಾಡು ಮೂಲದವಳೆಂದು ತಿಳಿದುಬಂದಿದೆ.

Share with Friends
author avatar
Digital Desk