
ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್..!
ಬೆಂಗಳೂರು : ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಮುಚ್ಚಲಾದ ಬಟ್ಟೆಯನ್ನು ಸರಿಸಿ ಕಾರನ್ನು ಅನ್‌ವೀಲ್ ಮಾಡಿದ್ದಾರೆ.
ಈ ವೇಳೆ ಹೂಗುಚ್ಛಗಳನ್ನು ನೀಡಿ ಮಹೀಂದ್ರಾ ಕಂಪನಿಯ ಸಿಬ್ಬಂದಿ ಸುದೀಪ್ ಅವರ ಹೊಸ ಕಾರಿನ ಜರ್ನಿಗೆ ಶುಭ ಕೋರಿದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಲ್ಲಾಒಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ ಓಡಾಡುವ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ.

ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕಿಚ್ಚ ಸುದೀಪ್ ಅವರು ಐಷಾರಾಮಿ ಕಾರುಗಳ ಲಿಸ್ಟ್‌ಗೆ ಹೊಸ ಎಲೆಕ್ಟ್ರಿಕ್ ಕಾರನ್ನು ಸೇರಿಸಿದ್ದಾರೆ. ಮಹೀಂದ್ರಾ ಕಂಪನಿಯ ‘BE 6’ ಮಾದರಿಯ ಹೊಸ ಇವಿ ಕಾರನ್ನು ಅವರು ಅದ್ದೂರಿಯಾಗಿ ಮನೆಗೆ ತಂದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಸಿನಿಮಾಗಳು ಹಾಗೂ ಬಿಗ್ ಬಾಸ್ ಶೋ ನಡುವೆ ಕಿಚ್ಚನ ಈ ಹೊಸ ರೈಡ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
