
ರಾಜ್ಯದಲ್ಲಿ SIR ಪ್ರಕ್ರಿಯೆಯ ಅರ್ಜಿಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣ
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅರ್ಜಿಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಈ ಪೈಕಿ 4,45,34,784 ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇನ್ನೂ 1,08,97,530 ಮತದಾರರ ಮಾಹಿತಿ ಡಿಜಿಟಲೀಕರಣವಾಗಿಲ್ಲ ಎಂದು ತಿಳಿಸಲಾಗಿದೆ.
ಡಿಜಿಟಲೀಕರಣವಾಗದ 1,08,97,530 ಮತದಾರರನ್ನು ASDDO ಎಂದು ಗುರುತಿಸಲಾಗಿದೆ. ಇದರಲ್ಲಿ Absent (ಗೈರು), Shifted (ಸ್ಥಳಾಂತರ), Death (ಮೃತ), Duplicate (ನಕಲಿ/ದ್ವಂದ್ವ) ಹಾಗೂ Other (ಇತರೆ)** ಪ್ರಕರಣಗಳು ಸೇರಿವೆ ಎಂದು ಆಯೋಗ ತಿಳಿಸಿದೆ.
ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯಂತೆ, ASDDO ಪಟ್ಟಿಯಲ್ಲಿ 11.87% ಮೃತ ಮತದಾರರು, 2.95% ಪತ್ತೆಯಾಗದ ಮತದಾರರು ಹಾಗೂ 1.26% ಇತರೆ ಪ್ರಕರಣಗಳು ಇರುವುದಾಗಿ ಉಲ್ಲೇಖಿಸಲಾಗಿದೆ. ಈಗಾಗಲೇ ASDDO ಪಟ್ಟಿಯನ್ನು ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಚುನಾವಣಾ ಆಯೋಗ ನೀಡಿದೆ.
ಇನ್ನು SIR ಪ್ರಕ್ರಿಯೆಯಲ್ಲಿ ಬೆಂಗಳೂರು ಭಾಗದಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ ಎನ್ನಲಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ.
