EntertainmentLatestTop Stories

ಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಕಣ್ಣೀರು ಹಾಕಿದ ಮಗ ವಿನೀಶ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ದರ್ಶನ್‌ (Darshan) ಅವರು ಜೈಲಿನಲ್ಲಿದ್ದಾರೆ. ಬುಧವಾರ ದಾಸನನ್ನು ನೋಡಲು ಪತಿ ವಿಯಲಕ್ಷ್ಮಿ (Vijayalakshmi) ಮತ್ತು ಪುತ್ರ ವಿನೀಶ್‌ ಭೇಟಿ ಕೊಟ್ಟಿದ್ದರು.

ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅವರಿಗೆ ಊಟ ಒಗ್ಗುತ್ತಿಲ್ಲ. ನಿದ್ದೆ ಬರುತ್ತಿಲ್ಲ. ಈ ಮಧ್ಯೆ ಜೈಲಿನಲ್ಲಿರುವ ದರ್ಶನ್ ಅವರನ್ನು ಕುಟುಂಬದವರು ಮೂರು ಬಾರಿ ಭೇಟಿ ಮಾಡಿದ್ದಾರೆ. ವಿಜಯಲಕ್ಷ್ಮಿ, ಮಗ ವಿನೀಶ್ ಸೇರಿದಂತೆ ಕುಟುಂಬಸ್ಥರು ಬಂದು ದರ್ಶನ್ ಅವರನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ವಿರೋಧ ತಂದೆ-ತಾಯಿ- ಹೆತ್ತರವನ್ನ, ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

https://youtu.be/vfdhjcm8fjs?si=mI46H5Wr5Acat08d

ದರ್ಶನ್ ಭೇಟಿಯಾದಾಗ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದರು. ಬಟ್ಟೆ, ಹಣ್ಣುಗಳನ್ನು ನೀಡಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ಕಣ್ಣೀರು ಹಾಕಿದ್ದಾನೆ. ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಬಾವುಕರಾಗಿದ್ದಾರೆ. ಇದನ್ನೂ ಓದಿ: ಹೊಟ್ಟೆ ಕಿಚ್ಚಿನಿಂದ ಇಲ್ಲಸಲ್ಲದ ಆರೋಪ: ಸಿದ್ದರಾಮಯ್ಯ

ಜೈಲೂಟ ಮಾಡಲು ಆಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ವಕೀಲರ ಮೂಲಕ ಕೋರ್ಟ್​​ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ದರ್ಶನ್​ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಸದ್ಯ ಮನೆ ಊಟ ಕೊಡುವ ಬಗ್ಗೆ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಜುಲೈ 18ರಂದು ಈ ಬಗ್ಗೆ ನಿರ್ಧಾರ ಆಗಲಿದೆ. ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ಪತ್ನಿಯ ಬಳಿ ಕೇಳಿ ದರ್ಶನ್ ತಿಳಿದುಕೊಂಡಿದ್ದಾರೆ. ಜಾಮೀನು ಪ್ರಕ್ರಿಯೆ ಬಗ್ಗೆಯೂ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆದಿದೆ.

https://youtu.be/O4L6RQjcl_M?si=zaV4G9pTNp5kI-2C

ಮಗನ ಕಂಡು ದರ್ಶನ್ ಖುಷಿಯಾಗಿದ್ದರು. ಮತ್ತೆ ರಾತ್ರಿಯಾಗುತ್ತಿದ್ದಂತೆ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ. ಇತರ ಜೈಲು ಸಿಬ್ಬಂದಿ ಜೊತೆ ಅವರು ಬರೆಯುತ್ತಿಲ್ಲ. ವರ್ಕೌಟ್ ಇಲ್ಲದೆ, ಸರಿಯಾದ ಆಹಾರ ಇಲ್ಲದೆ ಮಾನಸಿಕವಾಗಿ ದರ್ಶನ್ ಕುಗ್ಗಿ ಹೋಗಿದ್ದಾರೆ. ಕುಟುಂಬದವರು ಬಂದು ಧೈರ್ಯ ಹೇಳಿದರೂ ದರ್ಶನ್ ಚಡಪಡಿಕೆ ನಿಂತಿಲ್ಲ. ಇದನ್ನೂ ಓದಿ: ಸೇನೆ ಮೇಲೆ ದಾಳಿ – ಬೆದರಿಸಿ ಅಡುಗೆ ಮಾಡುವಂತೆ ಗ್ರಾಮಸ್ಥರಿಗೆ ಒತ್ತಾಯಿಸಿದ್ದ ಉಗ್ರರು

Share with Friends
author avatar
News Desk