Latestಕಲಬುರಗಿ-Kalaburagiಕೃಷಿ-Agricultureಜಿಲ್ಲಾ ಸುದ್ದಿಗಳು | District Newsರಾಜ್ಯ-Karnataka

ರೈತರ ಸಾಲ ಮನ್ನಾ ಪರಿಶೀಲನೆ

ಕಲಬುರಗಿ,ಜು.7 :‌ ರಾಜ್ಯದಲ್ಲಿ ರೈತರ ಸಾಲ ಮನ್ನಾ ಸಂಬಂಧ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಲಬುರಗಿಯಲ್ಲಿ ಸಾಲ ಮನ್ನಾ ಕುರಿತಂತೆ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್‌,ಎಲ್ಲಿಯ ಸಾಲ, ಯಾವ ಸಾಲ ಎಂಬುದನ್ನು ಪರಿಶೀಲನೆ ಮಾಡೋಣ ಎಂದು ಹೇಳಿದ್ದಾರೆ.


ಇನ್ನು ನಾನು ಬರಗಾಲ ಪರಿಸ್ಥಿತಿ ಅವಲೋಕಿಸಲು ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿದ್ದೇನೆ. ಇಲ್ಲಿನ ಜನರು ಮತ್ತು ಜನಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇನೆ. ಇಲ್ಲಿನ ಪರಿಸ್ಥಿತಿಯ ಅವಲೋಕನಕ್ಕೆ ಸಭೆ ನಡೆಸುತ್ತಿದ್ದೇನೆ. ಅದೇ ರೀತಿ ಎರಡು ಮೂರು ದಿನ ಬಿಟ್ಟು ಬೆಳಗಾವಿಗೂ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜನರ ಸಮಸ್ಯೆ ಆಲಿಸಲು ಹೊಸದಾಗಿ ಪ್ರಜಾಸೇವಾ ಇಲಾಖೆ ಸ್ಥಾಪಿಸಿ, ಸಚಿವರನ್ನು ನೇಮಕ ಮಾಡಿ, ಜನರ ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ಸಾಧ್ಯವಾದಷ್ಟು ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಕಲಬುರ್ಗಿ ಸರಕಾರಿ ಅತಿಥಿ ಗೃಹದ ಆವರಣದಲ್ಲಿ ಸಾರ್ವಜನಿಕರು, ರೈತರು ಸಿಎಂ ಡಿಕೆಶಿಗೆ ಅಹವಾಲು ಸ್ವೀಕರಿಸಿದರು.

Share with Friends
author avatar
Digital Desk