ಬೈಕ್ಗೆ ಪತ್ನಿಯನ್ನು ಕಟ್ಟಿ ದರದರನೆ ಎಳೆದೊಯ್ದ ಪತಿ, ವಿಡಿಯೊ ವೈರಲ್
ಜೈಪುರ : ಪತಿ ತನ್ನ ಪತ್ನಿಯನ್ನು ಬೈಕ್ಗೆ ಕಟ್ಟಿಹಾಕಿ ಗ್ರಾಮದಲ್ಲಿ ಎಳೆದಾಡಿರುವ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದು ಕಳೆದ ತಿಂಗಳು ನಡೆದ ಘಟನೆ ಎನ್ನಲಾಗಿದ್ದು ಮಹಿಳೆಯನ್ನು ಬೈಕ್ ಗೆ ಕಟ್ಟಿ ಎಳೆದು ಚಿತ್ರಹಿಂಸೆ ನೀಡುತ್ತಿರುವ ಈ ವಿಡಿಯೊವನ್ನು ಒಬ್ಬ ಮಹಿಳೆ ಮತ್ತು ಪುರುಷ ಚಿತ್ರೀಕರಿಸಿದ್ದಾರೆ . ಪತ್ನಿಗೆ ಶಿಕ್ಷೆ ನೀಡುವುದಕ್ಕಾಗಿ ಆ ವ್ಯಕ್ತಿ ಆಕೆಯನ್ನು ಬೈಕ್ ಗೆ ಕಟ್ಟಿ ಎಳೆದಿದ್ದಾನೆ ಎನ್ನಲಾಗಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರು ಗ್ರಾಮದ ಜನರು ನಿಂತು ನೋಡುವುದನ್ನು ನಾವು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೊನೆಯಲ್ಲಿ ಮತ್ತೊಬ್ಬ ಮಹಿಳೆ ಬಂದು ಆಕೆಗೆ ಸಹಾಯ ಮಾಡಿದ್ದಾರೆ.
ಜೈಸಲ್ಮೇರ್ನಲ್ಲಿರುವ ತನ್ನ ಸಹೋದರಿ ನೋಡಲು ಹೋಗುತ್ತೇನೆ ಎಂದಿದ್ದಕ್ಕೆ ಹೆಂಡತಿಗೆ ಪತಿ ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಈ ಘಟನೆ ನಡೆದು ಒಂದು ತಿಂಗಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಹರಸಿಂಗ್ಪುರ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆರೋಪಿ ಯುವಕನ ಹೆಸರು ಪ್ರೇಮರಾಮ್ ಮೇಘವಾಲ್(32), ತನ್ನ ಪತ್ನಿಯನ್ನು ದ್ವಿಚಕ್ರವಾಹನದ ಹಿಂಭಾಗಕ್ಕೆ ಹಗ್ಗದಿಂದ ಕಟ್ಟಿ ಗ್ರಾಮಕ್ಕೆ ಎಳೆದೊಯ್ದಿದ್ದಾನೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
