BlogLatestTop Storiesಕ್ರೀಡೆ-Sports

ಡಿ.22ಕ್ಕೆ ವೆಂಕಟ ದತ್ತ ಸಾಯಿ ಜೊತೆ ಹಸೆಮಣೆ ಏರಲಿದ್ದಾರೆ ಪಿವಿ ಸಿಂಧು, ಇಂದು ಎಂಗೇಜ್ಮೆಂಟ್

ನವದೆಹಲಿ: ಡಬಲ್ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಪೋಸೆಡೆಕ್ಸ್ ಟೆಕ್ನಾಲಜೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ ದತ್ತ ಸಾಯಿ ಜೊತೆ ಶನಿವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಎರಡು ವಾರಗಳ ಹಿಂದೆ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಪಂದ್ಯವನ್ನು ಗೆದ್ದ ಕೆಲವೇ ದಿನಗಳ ಬಳಿಕ ಪಿವಿ ಸಿಂಧು ಅವರ ಮದುವೆಯ ವಿಚಾರ ಹೊರಬಿದ್ದಿದ್ದು, ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಇಂದು ಅವರು ತಮ್ಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ 22 ರಂದು ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ವರದಿಯಾಗಿದೆ.

ಸಿಂಧು ಅವರ ವಿವಾಹದ ಕಾರ್ಯಕ್ರಮಗಳು ಡಿಸೆಂಬರ್ 20 ರಂದು ಪ್ರಾರಂಭವಾಗಲಿದೆ. ಡಿಸೆಂಬರ್ 22 ರಂದು ವಿವಾಹ ನಡೆಯಲಿದೆ. ಡಿಸೆಂಬರ್‌ 24 ರಂದು ರಿಸೆಪ್ಶನ್‌ ನೆರವೇರಲಿದೆ. ಸಿಂಧು ತಮ್ಮ ವಿವಾಹ ಸಮಾರಂಭಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಿದ್ದಾರೆ.

Share with Friends
author avatar
News Desk