Latestವಿದೇಶ-International

ಆಧುನಿಕ ಕುಬೇರನ ಮನೆಯಲ್ಲಿ ಸಿಕ್ತು 35 ಕೋಟಿಗೂ ಹೆಚ್ಚು ಆಸ್ತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಕುಮಾರ್ ಅವರ ಲಕ್ನೋ ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ನಿವೃತ್ತ ಅಧಿಕಾರಿ ಬಳಿ ಸಿಕ್ಕ ಆಸ್ತಿ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.13 ಕೆಜಿ ಚಿನ್ನ, 9 ಕೆಜಿ ಬೆಳ್ಳಿ, ವಜ್ರದ ಆಭರಣಗಳು ತನಿಖೆಯ ಸಮಯದಲ್ಲಿ ಸುಮಾರು 13 ಕೆಜಿ ಚಿನ್ನ ಮತ್ತು 9 ಕೆಜಿ ಬೆಳ್ಳಿ ಮತ್ತು ವಜ್ರದ ಆಭರಣಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 20 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಅಷ್ಟೇ ಅಲ್ಲದೇ, ಅಲಿಗಂಜ್, ಇಸ್ಮಾಯಿಲ್‌ಗಂಜ್, ಮೋಹನ್‌ಲಾಲ್‌ಗಂಜ್ ಮತ್ತು ಬಾಲ್‌ಗಂಜ್ ಸೇರಿದಂತೆ ಲಕ್ನೋದ ಹಲವಾರು ಪ್ರದೇಶಗಳಲ್ಲಿ ಮನೆಗಳು, ಪ್ಲಾಟ್‌ಗಳು ಮತ್ತು ಕೃಷಿ ಭೂಮಿ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ. ಇದರೊಂದಿಗೆ ನೋಯ್ಡಾದಲ್ಲಿ 2 ಫ್ಲಾಟ್‌ ಬುಕಿಂಗ್‌, ಬಾರಾಬಂಕಿ ಮತ್ತು ರಾಯ್‌ಬರೇಲಿಯಲ್ಲಿ ಭೂಮಿ ಹೊಂದಿರುವ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಸ್ಥಿರಾಸ್ತಿಗಳ ಅಂದಾಜು ಮೌಲ್ಯ ಸುಮಾರು 13 ಕೋಟಿ ರೂ. ಎಂದು ಹೇಳಲಾಗಿದೆ.

Share with Friends
author avatar
Digital Desk