Crime NewsLatestಬೆಂಗಳೂರು-Bengaluruರಾಜ್ಯ-Karnataka

ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಹೆಚ್‌ಡಿ ರೇವಣ್ಣ

ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ (Bengaluru) ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Bail) ಅರ್ಜಿಯನ್ನು ಜೆಡಿಎಸ್ ಶಾಸಕ ಹೆಚ್‌ಡಿ ರೇವಣ್ಣ (HD. Revanna) ಶುಕ್ರವಾರ (Friday) ಹಿಂಪಡೆದಿದ್ದಾರೆ.

ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಸೇರಿಸಿಲ್ಲ ಎಂಬ ವಿಶೇಷ ತನಿಖಾ ತಂಡದ ಹೇಳಿಕೆ ಬೆನ್ನಲ್ಲೇ ರೇವಣ್ಣ ಈ ಕ್ರಮ ಕೈಗೊಂಡಿದ್ದಾರೆ. ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪವಿಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಅಗತ್ಯವಿಲ್ಲ ಎಂದು ಎಸ್‌ಐಟಿಯ ಎಸ್‌ಪಿಪಿ ಎನ್. ಜಗದೀಶ್ ಕೋರ್ಟ್ಗೆ ತಿಳಿಸಿದರು. ಇದನ್ನೂ ಓದಿ: ಯಾವುದೇ ದೇಶದಲ್ಲಿದ್ದರೂ ಪ್ರಜ್ವಲ್ ರೇವಣ್ಣನ್ನು ಹಿಡಿದು ತರುತ್ತೆವೆ: ಸಿದ್ದರಾಮಯ್ಯ

https://youtu.be/nI2P8jWVlJE?si=a8W7fcuCaRsbMIpU

ಈ ದಿನದವರೆಗೆ ರೇವಣ್ಣ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಲ್ಲ ಎಂದು ಎನ್. ಜಗದೀಶ್ ಕರ್ನಾಟಕ ಹೈಕೋರ್ಟ್ಗೆ ನೀಡಿದ್ದ ಮಾಹಿತಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದಾಖಲಿಸಿಕೊಂಡಿತು. ನಂತರ ರೇವಣ್ಣ ಅರ್ಜಿ ವಾಪಸ್ ಪಡೆದರು.ಇದನ್ನೂ ಓದಿ: ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಸ್ನೇಹಿತನನ್ನೆ ಕೊಲೆ ಮಾಡಿದ ರೌಡಿಶೀಟರ್

https://youtu.be/L_NVdLRw1yE?si=gB_AxJs_zglciEXM

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ರೇವಣ್ಣಗೆ ಸಂಕಷ್ಟ ಶುರುವಾಗಿದೆ. ಈ ಮಧ್ಯೆ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲು ರೇವಣ್ಣ ಕಾಲಾವಕಾಶ ಕೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ‘ಬೆಂದ’ಕಾಳೂರಿಗೆ ತಂಪನ್ನೇರೆದ ವರುಣಾ…! ನಿನ್ನೆ ಸಂಜೆ ಸುಮಾರು 3 ಗಂಟೆಗಳ ಕಾಲ ಮಳೆ

https://youtu.be/UL9s6ben-sE?si=kxwC8iU_csVS2a1P
Share with Friends
author avatar
News Desk