Latestಬೆಂಗಳೂರು-Bengaluruರಾಜ್ಯ-Karnataka

ಏರ್‌ಪೋರ್ಟ್‌ನಲ್ಲಿ 3 ಅಧಿಕಾರಿಗಳಿಂದ ಪ್ರಜ್ವಲ್‌ ಬಂಧನ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು 35 ದಿನಗಳ ಬಳಿಕ ಬಂಧಿಸಲಾಗಿದೆ. ವಿದೇಶದಿಂದ ಬೆಂಗಳೂರು ಏರ್‌ಪೋರ್ಟ್‌ಗೆ (Airport) ಆಗಮಿಸುತ್ತಿದ್ದಂತೆ ಪ್ರಜ್ವಲ್‌ರನ್ನು ಮಹಿಳಾ ಅಧಿಕಾರಿಗಳು ಬಂಧಿಸಿದ್ದಾರೆ.

ಮಧ್ಯರಾತ್ರಿ 12:40 ಸುಮಾರಿಗೆ ಏರ್‌ಪೋರ್ಟ್‌ನಲ್ಲಿ . ಮಹಿಳಾ ಅಧಿಕಾರಿಗಳ ಮೂಲಕ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ. ಅದು ಯಾಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

https://youtu.be/7yBIMPkTX5U?si=vTjQuZzGImHDk2OF

ಜೀಪ್‌ ಚಾಲಕ ಹೊರತು ಪಡಿಸಿದರೆ ಉಳಿದವರೆಲ್ಲಾ ಮಹಿಳಾ ಅಧಿಕಾರಿಗಳು, ಸಂಸದನ ಬಂಧನ ಸಂದರ್ಭದಲ್ಲಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಮುಜುಗರ ಉಂಟುಮಾಡುವ ನಿಟ್ಟಿನಲ್ಲಿ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿಮಾನ ಟೇಕ್​ ಆಫ್​ ಸಮಯದಲ್ಲಿ ಇಂಜಿನ್​ನಲ್ಲಿ ಸಿಲುಕಿ ವ್ಯಕ್ತಿ ಸಾವು

https://youtu.be/NjDFYrxzGPQ?si=4CWVF4YcDVIyCyWS

ಅಲ್ಲದೇ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಬೇಕು. ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂದೇಶ ರವಾನಿಸಬೇಕು. ಹೀಗಾಗಿ ಮಹಿಳಾ ಅಧಿಕಾರಿಗಳಿಂದ ಎಸ್‌ಐಟಿ ಬಂಧನ ಮಾಡಿಸಿದೆ. ಇದನ್ನೂ ಓದಿ: ಕಂದಕಕ್ಕೆ ಬಸ್‌ ಉರುಳಿ 22 ಮಂದಿ ಸಾವು – ಪಿಎಂ ಸಂತಾಪ

Share with Friends
author avatar
News Desk