BlogLatestTop Storiesರಾಷ್ಟ್ರೀಯ-National

ಚೆನ್ನೈ ಏರ್ ಶೋ ವೇಳೆ ಕಾಲ್ತುಳಿತಕ್ಕೆ ಐದು ಮಂದಿ ಸಾವು

ಚೆನ್ನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ಭಾರತೀಯ ವಾಯುಸೇನೆಯ ಏರ್ ಶೋ ಕಾರ್ಯಕ್ರಮದ ವೇಳೆ ಐದು ಮಂದಿ ಸಾವನ್ನಪ್ಪಿದ್ದು, 250ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಏರ್ ಶೋ ವೀಕ್ಷಿಸಲು ತೆರಳಿದ್ದ ಐದು ಮಂದಿ ಪೇಕ್ಷಕರು ಸಾವನ್ನಪ್ಪಿದ್ದು, ಅವರ ಸಾವಿಗೆ ಹೀಟ್ ಸ್ಟ್ರೋಕ್ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಅಂತೆಯೇ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ 250ಕ್ಕೂ ಅಧಿಕ ಮಂದಿ ಸಿಲುಕಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

21 ವರ್ಷದ ಬಳಿಕ ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್​ ಶೋ ನಡೆದಿದ್ದು, ಲೋಹದ ಹಕ್ಕಿಗಳ ಸಾಹಸ ವೀಕ್ಷಿಸಲು 16 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಏರ್‌ ಶೋಗೆ ಮಾಡಿದ್ದ ವ್ಯವಸ್ಥೆಯಿಂದ ದುರಂತ ಸಂಭವಿಸಿದೆ.

ಚೆನ್ನೈನ ಈ ಏರ್ ಶೋ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿದ್ದು, ಅತಿ ಹೆಚ್ಚು ಜನರು ಏರ್‌ ಶೋ ವೀಕ್ಷಿಸಿದ್ದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ದಾಖಲೆ ಸೇರಿದೆ. ಆದರೆ ಏರ್ ಶೋದಲ್ಲಿ ಮಾಡಿದ್ದ ಅವ್ಯವಸ್ಥೆಯಿಂದ ನೂರಾರು ಜನ ಪರದಾಡುವಂತಾಗಿದೆ.

ಚೆನ್ನೈ ಏರ್‌ ಶೋನ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣವಾಗಿದೆ. ಸರಿಯಾಗಿ ಜನದಟ್ಟಣೆ ನಿಯಂತ್ರಣ ಮಾಡದ ಕಾರಣದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಏರ್‌ ಶೋದಿಂದ ಹೊರಗೆ ಹೋಗಲಾಗದೇ ಲಕ್ಷಾಂತರ ಜನರು ಸಿಲುಕಿ ಒದ್ದಾಡಿದ್ದಾರೆ. ಹೀಗಾಗಿ ನಿರ್ಜಲೀಕರಣದಿಂದ ಜನರ ಸಾವು ಸಂಭವಿಸಿರುವ ಸಾಧ್ಯತೆ ಇದೆ.

Share with Friends
author avatar
News Desk