BlogEntertainmentLatestಸ್ಯಾಂಡಲ್​ವುಡ್-Sandalwood

ಜೈಲಿಂದ ದರ್ಶನ್ ಬಿಡುಗಡೆಗಾಗಿ ಅಣ್ಣಮ್ಮನ ಮೊರೆಹೋದ ಸಹೋದರ ದಿನಕರ್

ಬೆಂಗಳೂರು : ರೇಣುಕಾಸ್ವಾಮಿ ಕೇಸ್​ನ ಆರೋಪದಲ್ಲಿ ಸ್ಯಾಂಡಲ್​ವುಡ್ ನಟ ದರ್ಶನ್ ತೂಗುದೀಪ ಅವರು ಬಳ್ಳಾರಿ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿರುವ ಹೊರತಾಗಿಯೂ ದರ್ಶನ್​ಗೆ ಜಾಮೀನು ಇನ್ನೂ ಸಿಕ್ಕಿಲ್ಲ. ಈ ನಡುವೆ ಅಣ್ಣ ದರ್ಶನ್ ಗಾಗಿ ತಮ್ಮ ದಿನಕರ್ ಟೆಂಪಲ್ ರನ್ ಮಾಡಿದ್ದಾರೆ. ಅಣ್ಣನ ಬಿಡುಗಡೆಗಾಗಿ ಬೆಂಗಳೂರುನಗರ ದೇವತೆಯ ಮೊರೆ ಹೋಗಿದ್ದಾರೆ ದಿನಕರ್ ತೂಗುದೀಪ. ಬೆಂಗಳೂರು ಅಧಿ ದೇವತೆ ಅಣ್ಣಮ್ಮಾ ತಾಯಿಗೆ ದಿನಕರ್ ಪೂಜೆ ಸಲ್ಲಿಸಿದ್ದಾರೆ.

ದರ್ಶನ್ ಆದಷ್ಟು ಬೇಗ ಹೊರಬರಲೆಂದು ಅಣ್ಣಮ್ಮನಿಗೆ ಮೀಸಲು ಕಟ್ಟಿದ್ದಾರೆ ದಿನಕರ್ ತೂಗುದೀಪ. ಕುಟುಂಬ ಸಮೇತರಾಗಿ ಅಣ್ಣಮ್ಮಾ ದೇವಿಗೆ ಪೂಜೆ ಸಲ್ಲಿಸಿದ ದರ್ಶನ್ ಸಹೋದರ ಪೂಜೆ ಸಲ್ಲಿಸಿ ಅಣ್ಣ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ.

2011 ರಲ್ಲಿ ದರ್ಶನ್ ದಾಂಪತ್ಯ ಕಲಹದಿಂದ ಜೈಲು ಸೇರಿದ್ದರು. ಮಗ ಜೈಲು ಪಾಲಾದಾಗ ದರ್ಶನ್ ತಾಯಿ ಅಣ್ಣಮನ ಮೊರೆ ಹೊಗಿದ್ದರು. ದರ್ಶನ್ ತಾಯಿ ಅಣ್ಣಮನಿಗೆ ಮೀಸಲು ಕಟ್ಟಿದ ಒಂದು ವಾರಕ್ಕೆ ದರ್ಶನ್ ಅವರು ಬಿಡುಗಡೆಯಾಗಿದ್ರು.

ಅತ್ತ ಅವರ ಪತ್ನಿ, ಸಹೋದರ, ತಾಯಿ ಜಾಮೀನಿಗಾಗಿ ಒಡಾಡುತ್ತಲೇ ಇದ್ದಾರೆ. ಹೀಗಿದ್ದರೂ ಕೂಡಾ ನಟನಿಗೆ ಜಾಮೀನು ಮಾತ್ರ ಸಿಗುತ್ತಿಲ್ಲ. ಇತ್ತೀಚೆಗೆ ಅವರ ಸಹೋದರ ದಿನಕರ್ ತೂಗುದೀಪ ಅಣ್ಣನ ಸ್ಥಿತಿ ನೋಡಿ ಭಾವುಕರಾಗಿದ್ದರು. ಇದೀಗ ಅವರ ಅಣ್ಣನಿಗಾಗಿ ಅಣ್ಣಮ್ಮ ತಾಯಿ ಮೊರೆ ಹೋಗಿದ್ದಾರೆ.

Share with Friends
author avatar
News Desk