Latestರಾಷ್ಟ್ರೀಯ-National

ಆಯತಪ್ಪಿ ಹೆಲಿಕಾಪ್ಟರ್ ಒಳಗೆ ಬಿದ್ದ ದೀದಿ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಹೆಲಿಕಾಪ್ಟರ್ (Helicopter) ಒಳಗೆ ಹೋಗುವಾಗ ಕಾಲು ಜಾರಿ ಬಿದ್ದ ಪ್ರಸಂಗ ಪಶ್ಚಿಮ ಬರ್ಧಮಾನ್‌ನ ದುರ್ಗಾಪುರದಲ್ಲಿ ನಡೆದಿದೆ.

ದೀದಿ ದುಗಾಪುರದಿಂದ ಅಸನ್ಸೋಲ್ ತೆರಳಬೇಕಾಗಿತ್ತು. ಹೀಗಾಗಿ ಅವರು ಹೆಲಿಕಾಪ್ಟರ್ ಒಳಗೆ ಹೋಗಿ ಸೀಟಲ್ಲಿ ಕುಳಿತುಕೊಳ್ಳಲು ನೋಡಿದಾಗ ಆಯ ತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ಘೋಷಣೆ

https://youtu.be/DbyxeBZAkXM?si=kvqP8_vF9B5P86el

ಮಮತಾ ಅವರು ಸ್ಲಿಪ್ ಆಗಿ ಬೀಳುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದಂತಾದರೂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೂ ಎಂದಿನಂತೆ ಕೈ ಕೊಟ್ಟ ವಲಸಿಗರು

https://youtu.be/CIbkq-93c6o?si=xHPpE1qCuRxdunIU
Share with Friends
author avatar
News Desk