Latestಕಲಬುರಗಿ-Kalaburagiರಾಜ್ಯ-Karnataka

ಕಾಂಗ್ರೆಸ್ ನಾಯಕರಿಗೆ ಸೇರಿದ ಕಾರೀನಲ್ಲಿ 2 ಕೋಟಿಗೂ ಅಧಿಕ ಹಣ ವಶ

ಕಲಬುರಗಿ: ಆದಾಯ ತೆರಿಗೆ ಅಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿದ್ದು, ಕೈ (Congress) ನಾಯಕರಿಗೆ ಸೇರಿದ ಕಾರಿನಲ್ಲಿ ಸುಮಾರು 2 ಕೋಟಿಗೂ ಅಧಿಕ ಮೊತ್ತದ ಹಣ ಪತ್ತೆಯಾಗಿದ್ದು, ಅದನ್ನು ಸಿಜ್ (Seize) ಮಾಡಲಾಗಿದೆ.

ಕಲಬುರಗಿ ರೈಲ್ವೆ ನಿಲ್ದಾಣದಿಂದ (Railway Station) ಹಣ ಸಾಗಾಟ ಮಾಡುತ್ತಿದ್ದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಣ ಬೇರೆ ರಾಜ್ಯದಿಂದ ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಬಂದಿತ್ತು.

https://youtu.be/CIbkq-93c6o?si=buJD7PPlQG7bXa41

ಬಂದಿದ್ದ ಹಣವನ್ನು ರೈಲ್ವೆ ನಿಲ್ದದಾಣದಿಂದ ಇನ್ನೋವಾ ಕಾರಿನಲ್ಲಿ ಸಾಗಾಟ ಮಾಡಲು ಯತ್ನಿಸಿದ ಸಂದರ್ಭ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಯತಪ್ಪಿ ಹೆಲಿಕಾಪ್ಟರ್ ಒಳಗೆ ಬಿದ್ದ ದೀದಿ

https://youtu.be/DbyxeBZAkXM?si=7YXKmQhofu76cyBn

ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಾರು ಸಮೇತ ಹಣವನ್ನು ಸೀಜ್ ಮಾಡಿದ್ದು, ಕಲಬುರಗಿಯ ಖರ್ಗೆ ಸರ್ಕಲ್ ಬಳಿ ಇರುವ ಆದಾಯತೆರಿಗೆ ಇಲಾಖೆಯ ಕಚೇರಿಯಲ್ಲಿ ಹಣದ ಸಮೇತ ವಾಹನ ಸೀಜ್ ಮಾಡಿ ಪರಿಶಿಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ಘೋಷಣೆ

Share with Friends
author avatar
News Desk