Crime NewsLatestದಕ್ಷಿಣ ಕನ್ನಡ-Dakshina Kannadaರಾಜ್ಯ-Karnataka

ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್‌ಯಿಟ್ಟು ಚಿತ್ರೀಕರಣಕ್ಕೆ ಯತ್ನ-ಪೊಲೀಸರಿಂದ ಅಪ್ರಾಪ್ತನ ಬಂಧನ

ಮಂಗಳೂರು: ಮೆಡಿಕಲ್ ಕಾಲೇಜಿನ (Medical College) ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ (Mobile) ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ್ದ ಅಪ್ರಾಪ್ತನೊಬ್ಬ ಪೊಲೀಸರಿಗೆ (Police) ಸಿಕ್ಕಿಬಿದ್ದಿರುವ ಘಟನೆ ಮಂಗಳೂರಿನ (Mangaluru) ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಪ್ರಾಪ್ತ ರೋಗಿ (Patient) ನೆಪದಲ್ಲಿ ಮೆಡಿಕಲ್ ಕಾಲೇಜಿಗೆ ಬಂದು ಅಲ್ಲೇ ಇದ್ದ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿ ಮೊಬೈಲ್ ಫೋನ್ ಇಟ್ಟಿದ್ದಾನೆ. ಮೊಬೈಲ್ ಇಟ್ಟುಬಂದ ನಂತರ ಸ್ವಲ್ಪ ಹೊತ್ತಿನಲ್ಲೇ ಮೊಬೈಲ್ ರಿಂಗ್ ಅಗಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಪೋನ್‌ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ

https://youtu.be/WlU72Pb6dPQ?si=PTlUGp3kDr8mNj7D

ಕೂಡಲೇ ಟಾಯ್ಲೆಟ್ ಕೊಠಡಿಯೊಳಗೆ ಬಂದ ಭದ್ರತಾ ಸಿಬ್ಬಂದಿ ಹುಡುಕಾಡಿದಾಗ ಮೊಬೈಲ್ ಕಣ್ಣಿಗೆ ಬಿದ್ದಿದೆ. ಸದ್ಯ ಮೊಬೈಲ್‌ನಲ್ಲಿ ಯಾವುದೇ ದೃಶ್ಯ ಸೆರೆಯಾಗಿಲ್ಲ ಎಂದು ತಿಳಿದುಬಂದಿದೆ. ಬಳಿಕ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಪೋನ್‌ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ

ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸದು ಕಾಲೇಜು ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ ಸದಸ್ಯ – ಬಿಜೆಪಿ ಕಿಡಿ

https://youtu.be/S1f0nuU9A04?si=g3-vsL6HcoZ0EW5e
Share with Friends
author avatar
News Desk