BlogLatestTop Storiesಬೆಂಗಳೂರು-Bengaluru

ಸಿಲಿಕಾನ್ ಸಿಟಿಯಲ್ಲಿ ರಾತ್ರಿಯೀಡಿ ಸುರಿದ ಮಳೆ, ನದಿಗಳಂತಾದ ರಸ್ತೆಗಳು, ನಾನಾ ಅವಾಂತರ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಾತ್ರಿಯೀಡಿ ಸುರಿದ ಮಳೆ ನಾನಾ ಅವಾಂತರ ಸೃಷ್ಟಿಸಿದೆ. ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ನಗರದಾದ್ಯಂತ ಸುಮಾರು 60 ಮಿ.ಮೀಟರ್‌ ನಷ್ಟು ಮಳೆಯಾಗಿದೆ. ತಡರಾತ್ರಿ ಆರಂಭವಾಗಿ, ಬೆಳಗ್ಗೆ 7 ಗಂಟೆವರೆಗೂ ಅನೇಕ ಕಡೆ ಮಳೆ ಸುರಿದಿದೆ. ಮೆಜೆಸ್ಟಿಕ್, ಕಾಪೋರೇಷನ್, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ ಸೇರಿ ನಗರದ ಹಲವು ಕಡೆ ಸವಾರರು ಪರದಾಟ ನಡೆಸಿದ್ದಾರೆ.

ವಿಂಡ್ಸರ್ ಮ್ಯಾನರ್ ಸೇತುವೆ ಸರ್ವೀಸ್ ರಸ್ತೆಯಲ್ಲಿ ಕೆರೆಯಂತೆ ನೀರು ನಿಂತಿದೆ. ಎರಡು ಅಡಿಯಷ್ಟು ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಮಳೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿವೆ.

ಭಾರೀ ಮಳೆಗೆ ಮಲ್ಲೇಶ್ವರಂ ಕ್ಲೌಡ್ ನೈನ್ ಆಸ್ಪತ್ರೆ ಸಮೀಪ ರಸ್ತೆಗೆ ಮರ ಉರುಳಿದೆ. ಎರಡು ಸೀಳುಗಳಾಗಿ ಮುರಿದು ರಸ್ತೆಗೆ ಮರ ಬಿದ್ದಿದ್ದು ಆ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ.

ರಸ್ತೆಯಲ್ಲಿ ಹೋಗ್ತಿದ್ದವರ ಮೇಲೆ ಬೃಹತ್ ಮರದ ಕೊಂಬೆಗಳು ಬಿದ್ದ ಘಟನೆ ಮಾರುತಿ ಸೇವಾನಗರದಲ್ಲಿ ಇಂದು ಬೆಳಗ್ಗೆ 7 ರ ಸುಮಾರಿಗೆ ನಡೆದಿದೆ. ಬೈಕ್ ನಲ್ಲಿ ಮತ್ತು ನಡೆದುಕೊಂಡು ಹೋಗುವವರ ಮೇಲೆ ಮರದ ಕೊಂಬೆ ಬಿದ್ದು ನಾಲ್ಕು ಜನರಿಗೆ ಗಾಯಗಳಾಗಿವೆ. ಯಗೊಂಡವರನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ..?
ಕೊಡಿಗೇಹಳ್ಳಿ – 61 ಮಿಮೀ
ವಿವಿಪುರಂ – 57 ಮಿಮೀ
ವಿದ್ಯಾಪೀಠ – 56 ಮಿಮೀ
ಹಗದೂರು – 54 ಮಿಮೀ
ಯಲಹಂಕ – 51 ಮಿಮೀ
ಆರ್ ಆರ್ ನಗರ – 50 ಮಿಮೀ
ವಿ ನಾಗೇನಹಳ್ಳಿ – 50 ಮಿಮೀ
ಪುಲಿಕೇಶಿ ನಗರ – 49 mm
ಅರೆಕರೆ – 48 ಮಿಮೀ
ಹೆಚ್ ಎಸ್ ಆರ್ ಲೇಔಟ್ -45 ಮಿಮೀ
ನಾಗಪುರ – 44 ಮಿಮೀ
ಕಾಟನ್ ಪೇಟೆ – 43 ಮಿಮೀ
ಚಾಮರಾಜಪೇಟೆ – 43 ಮಿಮೀ
ಬಿಟಿಎಂ ಲೇಔಟ್ – 41 ಮಿಮಿ
ಹೂಡಿ – 40 ಮಿಮೀ

Share with Friends
author avatar
News Desk