
ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗ್ತಿದೆ ರಾತ್ರಿ ವೇಳೆಯ ರಾಬರಿಗಳು..!
ದೇವನಹಳ್ಳಿಯಲ್ಲಿ ರಾತ್ರಿ ವೇಳೆಯ ರಾಬರಿಗಳು ಹೆಚ್ಚಾಗಿದೆ .ರಾಬರಿ ಮಾಡಲು ಬಂದಿದ್ದ ಕಳ್ಳರಿಂದ ಭೀಕರ ಆಕ್ಸಿಡೆಂಟ್.
ಈ ಘಟನೆ ದೇವನಹಳ್ಳಿ ಹೊರವಲಯದ್ ಬೈಚಾಪುರ ಬಳಿ ಇರುವ ಬ್ರೆಗೇಡ್ ಗೇಟ್ ಬಳಿ ಈ ಘಟನೆ ನಡೆದಿದೆ. ಗಾಡಿಗಳನ್ನು ಅಡ್ಡ ಹಾಕಿ ಕಳ್ಳತನ ಮಾಡುವ ವೇಳೆ ಕಳ್ಳನಿಗೆ ಕಿಡ್ಡಿಯಾದ ಬೈಕ್,
ಹಾಗು ಈ ಅಪಘಾತದಲ್ಲಿ ಕಳ್ಳ ಮತ್ತು ಬೈಕ್ ಸವಾರರು ರಸ್ತೆಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇವೇಳೆ ತಡರಾತ್ರಿ 1 ಗಂಟೆ ಸುಮಾರಿಗೆ ರಾಬರಿ ಮಾಡಲು ಫೀಲ್ಡ್ ಗೆ ಇಳಿದಿದ್ದ ಇಬ್ಬರು ಕಳ್ಳರು,

ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿ ರಾಬರಿಗೆ ಪ್ಲಾನ್ ಮಾಡಿದ್ದಾರೆ ಕಳ್ಳರು . ಬೈಕ್ ಸವಾರರನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನು ಪೀಕುತಿದ್ದ ಕಳ್ಳರ ಗ್ಯಾಂಗ್.
ಇದೇ ವೇಳೆ ಬೈಕೊಂದಕ್ಕೆ ಅಡ್ಡ ಹಾಕಲು ಕಳ್ಳರು ಪ್ರಯತ್ನ ಪಟ್ಟಿದ್ದಾರೆ. ಕಳ್ಳರು ರಸ್ತೆಗೆ ಅಡ್ಡ ಇರುವುದು ನೋಡಿ ಬೈಕ್ ಸ್ಪೀಡ್ ಹೆಚ್ಚಿಸಿದ ಸವಾರ. ಬೈಕ್ ಅನ್ನು ಅಡ್ಡಹಾಕಲು ಪ್ರಯತ್ನಿಸಿದ ವೇಳೆ ರಸ್ತೆಗೆ ಬಿದ್ದ ಓರ್ವ ಕಳ್ಳ.
ಮತ್ತೊಬ್ಬ ಕಳ್ಳ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.ಕೂಡಲೇ ಪೊಲೀಸರು ಕಳ್ಳರನ್ನ ಮಟ್ಟ ಹಾಕಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೈಚಾಪುರ ಗ್ರಾಮದ ಸಮೀಪ ಘಟನೆ ನಡೆದಿದೆ .
