
ವೈರಲ್ ಜ್ವರಕ್ಕೆ ಭಯ ಬೇಡ: DHO ಡಾ. ಶ್ರೀನಿವಾಸ್ ಅಭಯ
ಕೋಲಾರ: ಜಿಲ್ಲೆಯಲ್ಲಿ ವೈರಲ್ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಲ್ ಜ್ವರಕ್ಕೆ ಭಯ ಬೇಡ ಎಂದು ಕೋಲಾರ DHO ಡಾ. ಶ್ರೀನಿವಾಸ್ ಅಭಯ ನೀಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 56 ಶೀತ-ಉಸಿರಾಟದ ಸಮಸ್ಯೆ (SARI) ಪ್ರಕರಣ ಪತ್ತೆ ಯಾಗಿದ್ದು, 56 ಪ್ರಕರಣಗಳಲ್ಲಿ 15 ಮಂದಿಗೆ H1N1 ಇನ್ಫ್ಲುಯೆಂಜಾ ದೃಢ ಪಟ್ಟಿದೆ ಎಂದು DHO ತಿಳಿಸಿದ್ದಾರೆ.ಇದರ ಜೊತೆಗೆ ಜಿಲ್ಲೆಯಾದ್ಯಂತ 2,110 ಶೀತ, ಕೆಮ್ಮು, ಜ್ವರ ಪ್ರಕರಣ ದಾಖಲು ಆಗಿವೆ.

ಜ್ವರ ನಿಯಂತ್ರಣಕ್ಕೆ ಜಿಲ್ಲೆಯ ಎಲ್ಲಾ PHC ಗಳಲ್ಲಿ ಫೀವರ್ ಕ್ಲಿನಿಕ್ ಆರಂಭ ಮಾಡಲಾಗಿದೆ. ತೀವ್ರ ನಿಗಾ ಅಗತ್ಯವಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲು ಸೂಚನೆ ನೀಡಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಗೆ ಬೆಂಗಳೂರಿನಿಂದ ಆಹಾರ ಸುರಕ್ಷತೆ ಮತ್ತು ಜಾಗೃತಿ ವಿಶೇಷ ತಂಡ ಆಗಮನ ವಾಗಿದೆ.ಭಯಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿದರೆ ಸೋಂಕನ್ನು ನಿಯಂತ್ರಿಸಬಹುದು ಎಂದು DHO ಡಾ. ಶ್ರೀನಿವಾಸ್ ಮನವಿ ಮಾಡಿದ್ದಾರೆ.
